ಶಿರೂರು: ಕ್ರೀಡಾಕೂಟಗಳ ಆಯೋಜನೆ ಕೇವಲ ಕ್ರೀಡೆಗೆ ಮಾತ್ರ ಮೀಸಲಾಗಿರುವುದಿಲ್ಲ ಬದಲಾಗಿ ಸಂಘಟನೆ,ಪರಸ್ಪರ ಬಾಂಧವ್ಯ ಹಾಗೂ ಸ್ನೇಹ ಸಾಮರಸ್ಯವನ್ನು ಬೆಳೆಸುತ್ತದೆ.ಮೇಸ್ತ ಸಮುದಾಯದ ಕ್ರೀಡಾ ಪಂದ್ಯಾಟಗಳನ್ನು ಆಯೋಜಿಸುವುದರ ಮೂಲಕ ಉತ್ತಮ ಕಾರ್ಯಕ್ರಮವನ್ನು ಶಿರೂರಿನ ಮೇಸ್ತ ಸಮಾಜ ಆಯೋಜಿಸಿದೆ.ಶಿಸ್ತು ಹಾಗೂ ಒಗ್ಗಟ್ಟು ಶ್ಲಾಘನೀಯವಾಗಿದೆ.ಈ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಮುಂದಿನ ದಿನಗಳಲ್ಲಿ ನಿರಂತರವಾಗಿ ಶಿರೂರಿನಲ್ಲಿ ನಡೆಯುತ್ತಿರಲಿ ಎಂದು ಉಡುಪಿ ಜಿಲ್ಲಾ ಮೇಸ್ತ ಸಮಾಜ ಶಿರೂರು ಅಧ್ಯಕ್ಷ ರಾಮ ಎ.ಮೇಸ್ತ ಹೇಳಿದರು ಅವರು ರವಿವಾರ ಶಿರೂರು ಸ.ಪ.ಪೂ ಕಾಲೇಜಿನ ಮೈದಾನದಲ್ಲಿ ನಡೆದ ಮೇಸ್ತ ಸಮಾಜ ಶಿರೂರು ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಮೇಸ್ತ ಟ್ರೋಪಿ -2026 ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಈ ಮಾತುಗಳನ್ನಾಡಿದರು.
ಶ್ರೀ ದುರ್ಗಾಂಬಿಕಾ ಸೇವಾ ಸಂಘ ಕೋಟೆಮನೆ ಅಧ್ಯಕ್ಷ ನಾರಾಯಣ ವಿ.ಮೇಸ್ತ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉದ್ಯಮಿ ಪಾಲಾಕ್ಷ ಮೇಸ್ತ, ಪುರುಷೋತ್ತಮ್ ಪಿ.ಮೇಸ್ತ ಸಾಗರ,ಧ.ಗ್ರಾ.ಯೋಜನೆ ಕೇಂದ್ರ ಸಮಿತಿ ಅಧ್ಯಕ್ಷ ವಾಸು ಎನ್.ಮೇಸ್ತ ಶಿರೂರು,ಶ್ರೀನಿವಾಸ ಆಚಾರ್ ರಿಪ್ಪನ್‌ಪೇಟೆ,ಕೃಷ್ಣಮೂರ್ತಿ ಎಸ್.ಕೋಟೆಮೆನೆ,ಮಾಜಿ ತಾ.ಪಂ ಸದಸ್ಯ ನಾರಾಯಣ ಟಿ.ಅಳ್ವೆಗದ್ದೆ,ಉದ್ಯಮಿ ರಘುರಾಮ ಕೆ.ಪೂಜಾರಿ,ವಕೀಲರಾದ ಲಿಂಗಪ್ಪ ಮೇಸ್ತ,ಉದ್ಯಮಿ ರಘುರಾಮ ವಿ.ಮೇಸ್ತ, ಕೋಟೆಮನೆ ದೇವಸ್ಥಾನದ ಅರ್ಚಕ ರಾಮಚಂದ್ರ ಡಿ.ಮೇಸ್ತ, ದುರ್ಗಾಂಬಿಕಾ ಸೇವಾ ಸಂಘದ ಕಾರ್ಯದರ್ಶಿ ಚಂದ್ರಶೇಖರ ಮೇಸ್ತ,ರವಿ ಜಿ.ಮೇಸ್ತ,ಬಾಲಕೃಷ್ಣ ವಿ.ಮೇಸ್ತ,ಶ್ರೀಧರ ಜಿ.ಮೇಸ್ತ ಕೋಟೆಮನೆ,ದಿವಾಕರ ಮೇಸ್ತ ಹಡವಿನಕೋಣೆ,ಮಹಾಂತೇಶ್ ಗೌಡ ಬೆಂಗಳೂರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಶ್ರೀನಿವಾಸ ಆಚಾರ್ ರಿಪ್ಪನ್‌ಪೇಟೆ ಮಾಲಕತ್ವದ ಚಾಲೇಂಜರ್‍ಸ್ ತಂಡ ಪ್ರಥಮ ಸ್ಥಾನ ಪಡೆದರು ಹಾಗೂ ಪ್ಯಾಂಥರ್ಸ್ ತಂಡ ದ್ವಿತೀಯ ಸ್ಥಾನ ಪಡೆದರು. ಗಣೇಶ ಮೇಸ್ತ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಬಾಡ ಶಾಲಾ ಮುಖ್ಯ ಶಿಕ್ಷಕ ಗಿರೀಶ್ ಪಿ.ಮೇಸ್ತ ಕಾರ್ಯಕ್ರಮ ನಿರೂಪಿಸಿದರು.ಕಿರಣ್ ವಿ.ಮೇಸ್ತ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು