ಬೈಂದೂರು: ಜೆಸಿಐ ಬೈಂದೂರು ಸಿಟಿ ಇದರ 2026ನೇ ಸಾಲಿನ ಜೇಸಿ ಸಂಭ್ರಮ -2025 ಶಿವಶಕ್ತಿ ಕಾರ್ಯಕ್ರಮ ಶಾರದಾ ವೇದಿಕೆ ಬೈಂದೂರಿನಲ್ಲಿ ನಡೆಯಿತು. ಬ್ರಹ್ಮಕುಮಾರಿ ದೀಪಾ ಜೇಸಿ ಸಂಭ್ರಮ -2025 ಶಿವಶಕ್ತಿ ಕಾರ್ಯಕ್ರಮ ಉದ್ಘಾಟಿಸಿದರು.
ಬೈಂದೂರು ಸಿಟಿ ಜೆಸಿಐ ಅಧ್ಯಕ್ಷ ರಾಜು ಮೊಗವೀರ ಅಧ್ಯಕ್ಷತೆ ವಹಿಸಿದ್ದರು.
ಜೆಸಿ ವಲಯ 2025ರ ನಿಕಟ ಪೂರ್ವ ಅಧ್ಯಕ್ಷ ಅಭಿಲಾಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮದನ್ ಕುಮಾರ್, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ರಾಮ ಮೊಗವೀರ, ಉದ್ಯಮಿ ಪ್ರಸಾದ್ ಪ್ರಭು, ಉದ್ಯಮಿ ವೀರೇಂದ್ರ ಪೂಜಾರಿ, ಪಟ್ಟಣ ಪಂಚಾಯತ್ ಆರೋಗ್ಯಾಧಿಕಾರಿ ಸಂತೋಷ್, ನಿಕಟ ಪೂರ್ವ ಅಧ್ಯಕ್ಷ ಅನಿತಾ ಆರ್ ಕೆ, ಕಾರ್ಯದರ್ಶಿ ರಾಘವೇಂದ್ರ, ಲೇಡಿ ಜೆ ಸಿ ಸಂಯೋಜಕಿ ಕವಿತಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮ ಕುಂದಾಪುರ ಸಹಾಯಕ ಶಾಖಾ ಪ್ರಬಂಧಕ ರಾಮ ಮೊಗವೀರ ಇವರಿಗೆ 2025ರ ಸಾಲಿನ ಜೆಸಿಐ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೂ ಛದ್ಮವೇಷ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಲಕ್ಕಿ ಕೂಪನ್ ಡ್ರಾ ನಡೆಯಿತು.

ಸ್ಥಾಪಕಾಧ್ಯಕ್ಷ ಮಣಿಕಂಠ ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರಿಯದರ್ಶಿನಿ ದೇವಾಡಿಗ ಸ್ವಾಗತಿಸಿದರು.ಚೈತ್ರ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ರಾಘವೇಂದ್ರ ವಂದಿಸಿದರು.