ಬೈಂದೂರು: ಶಾಸಕರ ಪರಿಕಲ್ಪನೆಯ ಅಂಗವಾಗಿ ಜ.24, 25, 26 ರಂದು ಬೈಂದೂರಿನಲ್ಲಿ ನಡೆಯಲಿರುವ ಬೈಂದೂರು ಉತ್ಸವ -2026 ಇದರ ಅಂಗವಾಗಿ ಗ್ರಾಮ ಪಂಚಾಯತ್ ಶಿರೂರು ನೇತ್ರತ್ವದಲ್ಲಿ ಶಿರೂರು ಗ್ರಾಮೋತ್ಸವ,ಆರೋಗ್ಯ ಮೇಳ ಹಾಗೂ ಬ್ರಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರಿನಲ್ಲಿ ನಡೆಯಿತು.
ಶಿರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ಆಚಾರ್ಯ ಶಿರೂರು ಗ್ರಾಮೋತ್ಸವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲಾಡಳಿತದ ನಿರ್ದೇಶನದಂತೆ ಬೈಂದೂರು ಉತ್ಸವದ ಪ್ರಯುಕ್ತ ಪ್ರತಿ ಗ್ರಾಮ ಪಂಚಾಯತ್‌ನಲ್ಲೂ ಗ್ರಾಮೋತ್ಸವ ಆಯೋಜಿಸಿದ್ದು ಇದರ ಮೂಲಕ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ಮತ್ತು ಅನುಕೂಲಗಳನ್ನು ನೇರವಾಗಿ ಪಡೆಯುವ ಅವಕಾಶ ದೊರಕಿದಂತಾಗಿದೆ.ಈ ಉತ್ಸವ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಹಾಗೂ ಈ ಉತ್ಸವಗಳು ಮನೋರಂಜನೆಯ ಜೊತೆಗೆ ಬೈಂದೂರು ಅಭಿವೃದ್ದಿಗೆ ಮುನ್ನುಡಿ ಆಗಲಿ ಎಂದರು.
ವೇದಿಕೆಯಲ್ಲಿ ಬೈಂದೂರು ಉತ್ಸವದ ಸಂಚಾಲಕರಾದ ಶ್ರೀ ಗಣೇಶ ಉಪ್ಪುಂದ,ಗ್ರಾ.ಪಂ ಸದಸ್ಯರಾದ ರವೀಂದ್ರ ಶೆಟ್ಟಿ ಆರ್‍ಮಕ್ಕಿಬಾಬು ಮೊಗೇರ್ ಅಳ್ವೆಗದ್ದೆ,ಉಷಾ ಜನಾರ್ಧನ ಗಾಣಿಗ,ಪ್ರೇಮಾ ಮೊಗೇರ್,ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಮಂಜುನಾಥ ಪೈ,ತುಳಸಿದಾಸ್ ಮೊಗೇರ್,ಕಾಲೇಜಿನ ಪ್ರಾಂಶುಪಾಲ ದೇವೇಂದ್ರ ಕೆ.ಮೊಗೇರ್,ಶೌರ್ಯ ವಿಪತ್ತು ಘಟಕದ ಸದಸ್ಯ ಗಿರೀಶ್ ಮೇಸ್ತ,ಸುಬ್ರಾಯ ನಾಯ್ಕ,ರವೀಂದ್ರ ಶೆಟ್ಟಿ ಹೊನ್ಕೇರಿ,ದಿನೇಶ್ ಶಿರೂರು,ನಾಗರಾಜ ಪ್ರಭು ಮಹಿಳಾ ಮತ್ತು ಮೇಲ್ವಿಚಾರಕಿ ರಶ್ಮೀತಾ,ಮೋಹನ್ ರೇವಣ್ಕರ್‌ಸಂಜೀವಿನ ಸಂಘದ ಅಧ್ಯಕ್ಷೆ ಜ್ಯೋತಿ ಮೊಗೇರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ,ನೇತ್ರ ತಪಾಸಣೆ ಶಿಬಿರ,ಆರೋಗ್ಯ ಮೇಳ,ಸಾಕು ನಾಯಿಗಳಿಗೆ ಹಾಗೂ ಜಾನುವಾರುಗಳಿಗೆ ಲಸಿಕೆ ಹಾಗೂ ಸಾರ್ವಜನಿಕರಿಗೆ ಆರೋಗ್ಯ,ಕೃಷಿ ಆವಿಷ್ಕಾರ ವಿವಿಧ ಮಾಹಿತಿಗಳನ್ನು ನೀಡಲಾಯಿತು.

ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿರೂರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ರಾಜೇಂದ್ರ ಶೆಟ್ಟಿ ಸ್ವಾಗತಿಸಿದರು.ಶಿಕ್ಷಕ ಶ್ರೀಕಾಂತ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ರಾಮನಾಥ ಪಿ.ಮೇಸ್ತ ವಂದಿಸಿದರು.
ವರದಿ/ಗಿರಿ ಶಿರೂರು
ಚಿತ್ರ: ಪವನ್ ಕುಮಾರ್ ಶಿರೂರು