ಬೈಂದೂರು: ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಇವರ ಪರಿಕಲ್ಪನೆಯ ಜ.24,25,26ರಂದು ನಡೆಯುವ ಬೈಂದೂರು ಉತ್ಸವದ ಪ್ರಯುಕ್ತ ಬೈಂದೂರು ಗಾಂಧಿ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟವನ್ನು  ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯ ಜಯಾನಂದ ಹೋಬಳಿದಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಸುರೇಶ ಬಟ್ವಾಡಿ,ಬೈಂದೂರು ಉತ್ಸವದ ಪ್ರಧಾನ ಸಂಚಾಲಕ ಗಣೇಶ ಗಾಣಿಗ,ಬೈಂದೂರು ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಗೋಪಾಲ ಪೂಜಾರಿ ವಸ್ರೆ,ಉತ್ಸವದ ಕ್ರೀಡಾ ಉಸ್ತುವಾರಿ ಗೌರೀಶ್ ಹುದಾರ್ ಉಪ್ಪುಂದ,ಬಾಬು ರಾವ್,ಜಗದೀಶ ದೇವಾಡಿಗ,ಗಣೇಶ ದೇವಾಡಿಗ,ಪ್ರಶಾಂತ ಪಡುವರಿ ಉಪಸ್ಥಿತರಿದ್ದರು.

ಸುಕುಮಾರ ಶೆಟ್ಟಿ ಸೂರ್ಕುಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

nine + twelve =