ಶಿರೂರು: ಮೇಸ್ತ ಸಮಾಜ ಶಿರೂರು ಇವರ ಆಶ್ರಯದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಮೇಸ್ತ ಟ್ರೋಪಿ -2026 ಇದರ 60 ಗಜಗಳ ಕ್ರಿಕೆಟ್ ಪಂದ್ಯಾಟ ಶನಿವಾರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಿತು.
ಹಿರಿಯರು ಹಾಗೂ ಧಾರ್ಮಿಕ ಮುಖಂಡರಾದ ನಾಗೇಶ ಎಂ.ಮೇಸ್ತ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿದರು.
ಶ್ರೀ ದುರ್ಗಾಂಬಿಕಾ ಸೇವಾ ಸಂಘ ಕೋಟೆಮನೆ ಅಧ್ಯಕ್ಷ ನಾರಾಯಣ ವಿ.ಮೇಸ್ತ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಸ್ಪರ ಪ್ರೀತಿ ವಿಶ್ವಾಸವಿದ್ದಾಗ ಮಾತ್ರ ಸುಸಂಸ್ಕ್ರತ ಸಮಾಜ ನಿರ್ಮಾಣ ಸಾಧ್ಯ.ಸಮಾಜದ ಬೆಳವಣಿಗೆಗೆ ಹಿರಿಯರ ತ್ಯಾಗ,ಕೊಡುಗೆಗಳನ್ನು ಯುವಜನತೆ ನೆನಪಿನಲ್ಲಿಟ್ಟುಕೊಳ್ಳಬೇಕು.ಕ್ರೀಡೆಯ ಮೂಲಕ ಪರಸ್ಪರ ಬಾಂಧವ್ಯ ವೃದ್ದಿಸುತ್ತದೆ.ಮೇಸ್ತ ಸಮಾಜ ಎಲ್ಲಾ ಜನಾಂಗದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದೆ ಎಂದರು.
ವಿಶೇಷ ಆಹ್ವಾನಿತರಾಗಿ ಕೊಲಂಬೋದಲ್ಲಿ ನಡೆದ ಅಂಧರ ವಿಶ್ವಕಪ್ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ್ತಿ ಕಾವ್ಯ ವಿ.ಆಚಾರ್ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿ ಕಠಿಣ ಪರಿಶ್ರಮ ಮತ್ತು ಗುರುವಿನ ಮಾರ್ಗದರ್ಶನ ಯಶಸ್ಸು ನೀಡುತ್ತದೆ.ಸಾಧನೆಗೆ ಯಾವುದು ಅಡ್ಡಿಯಲ್ಲ ದೌರ್ಬಲ್ಯ ಮೆಟ್ಟಿ ನಿಲ್ಲುವುದೇ ಜೀವನ ಕ್ರಿಕೆಟ್ ನನ್ನ ಬದುಕಿಗೆ ಭರವಸೆ ತಂದಿದೆ ಎಂದರು.
ವೇದಿಕೆಯಲ್ಲಿ ಸ.ಪ.ಪೂ ಕಾಲೇಜಿನ ಪ್ರಾಂಶುಪಾಲ ದೇವೇಂದ್ರ ಕೆ.ಮೊಗೇರ್,ಹೊಸನಗರ ತಾಲೂಕು ವಿಶ್ವಕರ್ಮ ಮಹಾಸಭಾ ಗೌರವಾಧ್ಯಕ್ಷ ದೇವಿದಾಸ್ ಎಚ್.ಆಚಾರ್,ನಿವೃತ್ತ ಸೈನಿಕ ರಮೇಶ ಬಿ.ಮೇಸ್ತ,ದುರ್ಗಾಂಬಿಕಾ ಸೇವಾ ಸಂಘದ ಉಪಾಧ್ಯಕ್ಷ ಶಂಕರ ಎಸ್.ಮೇಸ್ತ,ಕೃಷ್ಣ ಎನ್.ಮೇಸ್ತ,ತಿಮ್ಮಪ್ಪ ಮೇಸ್ತ,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಪರುಷೋತ್ತಮ್ ಪಿ.ಮೇಸ್ತ ಸಾಗರ,ಕೋಟೆಮನೆ ದೇವಸ್ಥಾನದ ಅರ್ಚಕ ಪಾಂಡುರಂಗ ಮೇಸ್ತ,ನಾಗೇಶ ಮೇಸ್ತ ಅರಮನೆಹಕ್ಲು,ಪಾಂಡುರಂಗ ವಿ.ಮೇಸ್ತ,ಮೋಹನ್ ರೇವಣ್ಕರ್,ಸುಶಾಂತ್ ಬೈಂದೂರು,ಎಂ.ಬಿ ಪಾಟಲ್ ಉಪಸ್ಥಿತರಿದ್ದರು.






ಈ ಸಂದರ್ಭದಲ್ಲಿ ಕೊಲಂಬೋದಲ್ಲಿ ನಡೆದ ಅಂಧರ ವಿಶ್ವಕಪ್ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ್ತಿ ಕಾವ್ಯ ವಿ.ಆಚಾರ್ ರವರನ್ನು ಮೇಸ್ತ ಸಮಾಜದ ವತಿಯಿಂದ ಸಮ್ಮಾನಿಸಲಾಯಿತು.
ವಾಸು ಮೇಸ್ತ ಶಿರೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಗಿರೀಶ್ ಪಿ.ಮೇಸ್ತ ಕಾರ್ಯಕ್ರಮ ನಿರೂಪಿಸಿದರು.ಕಿರಣ್ ವಿ.ಮೇಸ್ತ ವಂದಿಸಿದರು.
ವರದಿ/ಚಿತ್ರ: ಗಿರಿ ಶಿರೂರು