ಬೈಂದೂರು: ಕಳೆದ 104 ದಿನಗಳಿಂದ ರೈತರು ನ್ಯಾಯಕ್ಕಾಗಿ ಅನಿಧಿ೯ಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.ಜಿಲ್ಲಾಡಳಿತ ಸೇರಿದಂತೆ ರಾಜ್ಯಮಟ್ಟದ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ.ಸಚಿವರು ಹೇಳಿದರು ಅಧಿಕಾರಿಗಳು ರೈತರಿಗೆ ಸಹಕರಿಸುತ್ತಿಲ್ಲ.ಬೈಂದೂರು ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿ ಮರಳು ದಂಧೆಗೆ ಎರಡು ಪಕ್ಷದ ನಾಯಕರ ಹೊಂದಾಣಿಕೆ ಇದೆ.ಆದರೆ ರೈತರಿಗೆ ನ್ಯಾಯ ನೀಡಲು ಹೊಂದಾಣಿಕೆ ಇಲ್ಲಾ.ನಿಮ್ಮ ಒಳಗೊಳಗಿನ ಕುಚ್ ಕುಚ್ ಹೋತಾ ಹೈ ರೈತರ ಎದುರು ನಡೆಯಲ್ಲ ಎಂದು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

15ನೇ ತಾರೀಖಿನಂದು ಉಪವಾಸ ಸತ್ಯಾಗ್ರಹ: ಬಡ ರೈತರು ನ್ಯಾಯಕ್ಕಾಗಿ ಬೀದಿತಲ್ಲಿದ್ದಾರೆ ನಾಯಕರು ಹಣ ಮಾಡುವ ದಂಧೆಯಲ್ಲಿದ್ದಾರೆ.ಜನರ ಎದುರು ನಾಟಕ ಮಾಡುತ್ತಿದ್ದಾರೆ.ಸರಕಾರದ ಮಟ್ಟದಲ್ಲಿ ಎನಿದೆ ಎನ್ನುವುದು ಸ್ಪಷ್ಟವಾಗಿ ತಿಳಿಸಲಿ.೧೫ನೇ ತಾರೀಖಿನಂದು ರೈತರ ಉಗ್ರ ಪ್ರತಿಭಟನೆ ಆರಂಭಿಸಲಿದ್ದೇವೆ.ನೂರಾರು ರೈತರು ನ್ಯಾಯ ಸಿಗುವವರೆಗೆ ಬೈಂದೂರು ತಾಲೂಕು ಆಡಳಿತದ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತದೆ.ಮುಂದಿನ ಎಲ್ಲಾ ಸಮಸ್ಯೆಗೆ ಅಧಿಕಾರಿಗಳೆ ನೇರ ಕಾರಣವಾಗಲಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅರುಣ್ ಕುಮಾರ್ ಶಿರೂರು,ವೀರಭದ್ರ ಗಾಣಿಗ,ಕೇಶವ ಅಂತಾರ್,ಮಹಾದೇವ ಪೂಜಾರಿ ಕಿಸ್ಮತ್ತಿ,ಪದ್ಮಾಕ್ಷ ಗೋಳಿಬೇರು,ಲಿಮೋನ್ ಬೈಂದೂರು,ಸೂರ್ಯಕಾಂತಿನೂರಾರು ರೈತರು ಹಾಜರಿದ್ದರು.

ವರದಿ/ಗಿರಿ ಶಿರೂರು

 

Leave a Reply

Your email address will not be published. Required fields are marked *

2 × three =