ಬೈಂದೂರು,ಡಿ.30: ಜೀವನದಲ್ಲಿ ನಾವೆಷ್ಟೆ ಯಶಸ್ಸು ಗಳಿಸಬಹುವುದು ಆದರೆ ಶಿಕ್ಷಣ ಇಲ್ಲದೆ ಜೀವನ ಶೂನ್ಯ.ಶಿಕ್ಷಣಾಭಿಮಾನಿಗಳ ಸಹಕಾರ ಇದ್ದಾಗ ಸಂಸ್ಥೆಯ ಪ್ರಗತಿ ಸಾಧ್ಯ.ಪಾಲಕರ ಜವಬ್ದಾರಿ ಮತ್ತು ಶಿಕ್ಷಕರ ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ.ಗ್ರಾಮೀಣ ಭಾಗದಲ್ಲಿ ನೈಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ಮತ್ತು ಶೈಕ್ಷಣಿಕ ವಾತಾವರಣ ನೀಡಿದಾಗ ಯಶಸ್ಸು ಸಾದ್ಯ.ಬದಲಾವಣೆಗೆ ಹೊಂದಿಕೊಂಡು ಹೊಸತನ ಅಳವಡಿಸಿಕೊಂಡಾಗ ಶೈಕ್ಷಣಿಕ ಪ್ರಗತಿ ಸಾದ್ಯ ಎಂದು ನಿವೃತ್ತ ಸೈನಿಕ ಚಂದ್ರಶೇಖರ ನಾವಡ ಹೇಳಿದರು ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಲ್ಲಿಬಾರು (ಹೊಸೂರು) ಇದರ 2025ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ದಯಾನಂದ ಮರಾಠಿ ಅಧ್ಯಕ್ಷತೆ ವಹಿಸಿದ್ದರು.
ಜಿ.ಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ,ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಉದ್ಯಮಿ ಪ್ರಸಾದ ಪ್ರಭು,ಕಾಂಗ್ರೆಸ್ ಮುಖಂಡರಾದ ಶೇಖರ ಪೂಜಾರಿ ಉಪ್ಪುಂದ,ವಕೀಲರಾದ ಪ್ರಶಾಂತ ಪೂಜಾರಿ,ವಸಂತ್‌ರಾಜ್ ಹೊಸೂರು,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಥ್ಯ ಕೆ.ಎಸ್,ಉಪಾಧ್ಯಕ್ಷೆ ಸುಮತಿ ಆಚಾರಿ,ಗೌರವಾಧ್ಯಕ್ಷ ನಾರಾಯಣ ಪೂಜಾರಿ,ಗಣೇಶೋತ್ಸವ ಸಮಿತಿ ಮಾಜಿ ಅಧ್ಯಕ್ಷ ನಾಗರಾಜ ಕಂಬಾರಮುಲ್ಲಿ, ಅಧ್ಯಕ್ಷ ಮಹಾದೇವ ಮರಾಠಿ,ಕಾರ್ಯದರ್ಶಿ ವಾಸುದೇವ ಮರಾಠಿ,ವಿದ್ಯಾರ್ಥಿ ನಾಯಕ ದರ್ಶಿತ್ ಕುಮಾರ್,ನಾಯಕಿ ದಿಯಾ ಮರಾಠಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಶಾಲೆಗೆ ಧನಸಹಾಯ ನೀಡಿದ ಗಣ್ಯರನ್ನು ಸಮ್ಮಾನಿಸಲಾಯಿತು.

ಶಾಲಾ ಎಸ್.ಡಿ.ಎಮ್.ಸಿ ಮಾಜಿ ಅಧ್ಯಕ್ಷ ನಾಗಪ್ಪ ಮರಾಠಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ.ಹಿ.ಪ್ರಾ.ಶಾಲೆ ಕೊಲ್ಲೂರು ಶಾಲಾ ಶಿಕ್ಷಕ ಶಿವರಾಮ ಮರಾಠಿ ಸ್ವಸ್ತಿವಾಚನಗೈದರು.ಶಾಲಾ ಮುಖ್ಯ ಶಿಕ್ಷಕ ಮಹಾಬಲೇಶ್ವರ ಎಸ್.ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ವಿನಾಯಕ ಪಟಗಾರ್ ವಂದಿಸಿದರು.
ವರದಿ/ಗಿರಿ ಶಿರೂರು
pic/Abhi toodalli