ಶಿರೂರು: ಮೇಸ್ತ ಸಮಾಜ ಶಿರೂರು ಇವರ ಆಶ್ರಯದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಮೇಸ್ತ ಟ್ರೋಪಿ -2026 ಇದರ 60 ಗಜಗಳ ಕ್ರಿಕೆಟ್ ಪಂದ್ಯಾಟ ಜ.03 ಮತ್ತು 04 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಲಿದೆ.
ಹಿರಿಯರು ಹಾಗೂ ಧಾರ್ಮಿಕ ಮುಖಂಡರಾದ ನಾಗೇಶ ಎಂ.ಮೇಸ್ತ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಲಿದ್ದಾರೆ.ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಇದರ ಅಧ್ಯಕ್ಷ ನಾರಾಯಣ ವಿ.ಮೇಸ್ತ ಅಧ್ಯಕ್ಷತೆ ವಹಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಕೊಲಂಬೋದಲ್ಲಿ ನಡೆದ ಅಂಧರ ವಿಶ್ವಕಪ್ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ್ತಿ ಕಾವ್ಯ ವಿ.ಆಚಾರ್ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ ಹಾಗೂ ಮುಂತಾದ ಗಣ್ಯರು ಆಗಮಿಸಲಿದ್ದಾರೆ.
ಪ್ರಥಮ ಬಹುಮಾನವಾಗಿ 33,333 ಹಾಗೂ ದ್ವಿತೀಯ 22,222 ಹಾಗೂ ಶಾಶ್ವತ ಫಲಕ ದೊರೆಯಲಿದೆ ಎಂದು ಶಿರೂರು ಮೇಸ್ತ ಸಮಾಜದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.