ಬೈಂದೂರು: ಸಮೃದ್ಧ ಬೈಂದೂರು ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು, ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ,ಲಯನ್ಸ್ ಕ್ಲಬ್ ಉಪ್ಪುಂದ , ಜೋಗಿ ಮನೆ ಟ್ರಸ್ಟ್ ಹಳೆಗೇರಿ    ಇದರ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ ಪ್ರೇರಣಾ -2025  ಕಾರ್ಯಕ್ರಮ ಸರಕಾರಿ ಪದವಿ ಪೂರ್ವ ಕಾಲೇಜು ಶಿರೂರಿನಲ್ಲಿ ನಡೆಯಿತು.

ಎಸ್.ಡಿ.ಎಮ್.ಸಿ ಅಧ್ಯಕ್ಷ ತಾರಿಸುಲ್ಲಾ ಮೊಹಮ್ಮದ ಗೌಸ್ ಅಧ್ಯಕ್ಷತೆ ವಹಿಸಿದರು.   ಸಂಪನ್ಮೂಲ ವ್ಯಕ್ತಿ ವಲಯ ತರಬೇತುದಾರ ರಾಘವೇಂದ್ರ ಕರ್ವಾಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ,ವಸಂತ ಜೋಗಿ,ನಾಗವೇಣಿ ಪಟಗಾರ, ಸಯ್ಯದ ಅಜ್ಮಲ್, ಮಹಮ್ಮದ್ ಇಬ್ರಾಹಿಂ,ಸುಂದರ್ ಕೊಠಾರಿ, ಉಪನ್ಯಾಸಕಿ ನಾಗವೇಣಿ ಪಟಗಾರ್ ಹಾಜರಿದ್ದರು.

ಕಾರ್ಯಕ್ರಮದ ನಿರ್ದೇಶಕಿ ಸುಮಾ ಆಚಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಉಪನ್ಯಾಸಕಿ ಶ್ರಿದೇವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

Leave a Reply

Your email address will not be published. Required fields are marked *

1 × 1 =