ಶಿರೂರು: ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಶಿರೂರು ಗ್ರಾಮದ ಹಿರಿಯ ಪುರೋಹಿತರಾದ ಶ್ಯಾಮ ಅವಭೃತ (78) ಗುರುವಾರ ಬೆಳಿಗ್ಗೆ ತಮ್ಮ ಸ್ವ-ಗ್ರಹದಲ್ಲಿ ನಿಧನರಾದರು.ಧಾರ್ಮಿಕ, ಶ್ರದ್ದಾ ಭಕ್ತಿಯ ಜೊತೆಗೆ ಊರಿನ ಜನರ ಅತ್ಯುತ್ತಮ ಬಾಂಧವ್ಯ ಹೊಂದಿರುವ ಶ್ಯಾಮ ಅವಭೃತರು ಶಿರೂರಿನ ಚಿರಪರಿತರಾಗಿದ್ದರು.ಸರಳ ವ್ಯಕ್ತಿತ್ವ,ಮೃದು ಮಾತುಗಳ ಮೂಲಕ ಜನಪ್ರಿಯರಾಗಿದ್ದು ಮೃತರು ಪತ್ನಿ, ಮೂರು ಪುತ್ರರು,ಕುಟುಂಬದವರವನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಅವಭೃತರ ನಿಧನಕ್ಕೆ ಶಿರೂರಿನ ವಿವಿಧ ಗಣ್ಯರು ಸಾರ್ವಜನಿಕರು ಸಂತಾಪ ಸೂಚಿಸಿದ್ದಾರೆ.