ಬೈಂದೂರು: ಸಮೃದ್ಧ ಬೈಂದೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ತಾಲೂಕು, ಎನ್.ಎನ್.ಓ ಕಮ್ಯುನಿಟಿ ಸೆಂಟರ್ ಕುಂದಾಪುರ, ಜೋಗಿ ಮನೆ ಟ್ರಸ್ಟ್ ಹಳಗೇರಿ, ಲಯನ್ಸ್ ಕ್ಲಬ್ ಉಪ್ಪಂದ ಬೈಂದೂರು, ಸರ್ಕಾರಿ ಪ್ರೌಢಶಾಲೆ ಕಿರಿಮಂಜೇಶ್ವರ ಇವರ ಸಹಯೋಗದಲ್ಲಿ ಬೈಂದೂರು ತಾಲೂಕಿನ ವಿವಿಧ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಕಾರ್ಯಗಾರ ಸರಕಾರಿ ಫ್ರೌಢಶಾಲೆ ಕಿರಿಮಂಜೇಶ್ವರದಲ್ಲಿ ನಡೆಯಿತು.

ಜೋಗಿ ಮನೆ ಟ್ರಸ್ಟ್ ಹಳಗೇರಿ ವಸಂತ ಜೋಗಿ ಹಳಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಯ ಬಗ್ಗೆ ಮಕ್ಕಳ  ನಿರಾಸಕ್ತಿ ತೋರಿಸುವಿಕೆ ಆಂಗ್ಲ ಮಾಧ್ಯಮದ ಕಡೆ ಹೆಚ್ಚು ಒಲವು ತೋರಿಸುತ್ತಿದ್ದು ವಿದ್ಯಾರ್ಥಿಗಳ ಮನಸ್ಥಿತಿ ಹೆತ್ತವರು ಬದಲಾಸಬೇಕು ಹಾಗೂ ಮಕ್ಕಳಲ್ಲಿ ಕೂಡ ಓದುವ ಆಸಕ್ತಿ ಕಡಿಮೆ ಆಗುತ್ತಿದೆ ಎಂದರು.

ಕಿರೀಮಂಜೇಶ್ವರ ಪ್ರೌಢಶಾಲಾ  ಎಸ್.ಡಿ.ಎಮ್.ಸಿ ಅಧ್ಯಕ್ಷ ಭಾಸ್ಕರ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್,ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಶೇಖರ ಖಾರ್ವಿ, ಎನ್.ಎನ್.ಓ ಕಮ್ಯುನಿಟಿ ಸೆಂಟರ್ ಕುಂದಾಪುರ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ,ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ,ಹುಸೇನ್ ಹೈಕಾಡಿ,ಶಾಲಾ ಮುಖ್ಯ ಶಿಕ್ಷಕ ಮಂಜು ಎಂ.ಪೂಜಾರಿ,ತರಬೇತಿ ಕಾರ್ಯಕ್ರಮದ ನಿರ್ದೇಶಕಿ ಸುಮಾ ಆಚಾರ್ ಉಪ್ರಳ್ಳಿ,ಸಂಪನ್ಮೂಲ ವ್ಯಕ್ತಿ ಕೆ..ಕೆ ಶಿವರಾಮ,ಗಣೇಶ ಪೂಜಾರಿ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

fourteen − 13 =