ಬೈಂದೂರು,ಡಿ.28: ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ರಾಜ್ಯಮಟ್ಟದ ಬೃಹತ್ ಸಮ್ಮೇಳನ ಶಿರೂರಿನಲ್ಲಿ ಭಾನುವಾರ ನಡೆಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ ಚಾರೋಡಿ ಮೇಸ್ತ ಸಮಾಜದ ಜನರು ಪ್ರಾಮಾಣಿಕರಾಗಿದ್ದಾರೆ. ಕಲೆ ಹಾಗೂ ವಾಸ್ತುಶಿಲ್ಪ ಕೇತ್ರದಲ್ಲಿ ಅವರ ಕೊಡುಗೆ ಅಪಾರವಾಗಿದೆ. ಸಣ್ಣ ಸಮಾಜವಾಗಿದ್ದರು ಸಂಘಟಿತರಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.ಕೇಂದ್ರ ಸರಕಾರ ವಿಶ್ವಕರ್ಮ, ಮೇಸ್ತ ಸೇರಿದಂತೆ ಹಿಂದುಳಿದ ವರ್ಗಗಳ ಜನರ ಅನುಕೂಲಕ್ಕಾಗಿ ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದು, ಕಳೆದ ಬಜೆಟ್‌ನಲ್ಲಿ ಸುಮಾರು 13 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಿದೆ ಎಂದರು.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಸಮಾಜದ ಮುಂದಾಳುಗಳ ದೂರದೃಷ್ಟಿತ್ವದ ಚಿಂತನೆಗಳು ಸಂಘಟನೆಯನ್ನು ಇನ್ನಷ್ಟುಬಲಗೊಳಿಸುತ್ತದೆ. ಶಿಕ್ಷಣ ಆರ್ಥಿಕ ಕ್ಷೇತ್ರದ ಯೋಜನೆಯ ಬೆಳವಣಿಗೆಗೆ ಇಂತಹ ಸಮಾವೇಶ ಅತ್ಯಗತ್ಯ.ಚಾರೋಡಿ ಮೇಸ್ತ ಸಮಾಜ ಸ್ವಾಭಿಮಾನದ ಸಮಾಜವಾಗಿದೆ ಎಂದರು.
ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬೆಳಿಗ್ಗೆ ಶಿರೂರು ಕೆಳಪೇಟೆಯಿಂದ ಶಿರೂರು ಪದವಿ ಪೂರ್ವ ಕಾಲೇಜಿನ ವರೆಗೆ ನಡೆದ ಚಾರೋಡಿ ಮೇಸ್ತ ಸಮ್ಮೇಳನದ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಚಾರೋಡಿ ಮೇಸ್ತ ಸಮ್ಮೇಳನ ಉದ್ಘಾಟಿಸಿದರು. ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ರಾಜ್ಯಾಧ್ಯಕ್ಷ ರಾಮಚಂದ್ರ ಬಿ. ಶಿರೂರಕರ್ ಅಧ್ಯಕ್ಷತೆ ವಹಿಸಿದ್ದರು.
ಹೊನ್ನಾವರ -ಕುಮಟಾ ಶಾಸಕ ದಿನಕರ ಶೆಟ್ಟಿಸಮುದಾಯದ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದರು. ಸಮುದಾಯದ ಹಿರಿಯರಿಗೆ, ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಲಿಂಗಪ್ಪ ಮೇಸ್ತ, ಕರಿಕಟ್ಟೆವಿವಿಧ ಕಲಾ ಮಳಿಗೆ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿದರು..



ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಭಟ್ಕಳ ಮಾಜಿ ಶಾಸಕ ಸುನಿಲ್ ನಾಯ್ಕ ಭಟ್ಕಳ, ಶಿರೂರು ಶ್ರೀ ಗಣೇಶ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಜಿ. ಮೇಸ್ತ, ಜಿ.ಪಂ ಸದಸ್ಯ ಸುರೇಶ ಬಟ್ವಾಡಿ, ಬೈಂದೂರು ರೈತ ಸಂಘದ ಅಧ್ಯಕ್ಷ ನೆಲ್ಯಾಡಿ ದೀಪಕ ಕುಮಾರ್ ಶೆಟ್ಟಿ, ಉಮೇಶ ಎಲ್. ಮೇಸ್ತ ಬೆಣ್ಣೆಗೆರೆ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಮಧುಕರ್ ನಾಯಕ್ ಮಂಗಳೂರು, ರುಕ್ಮಾನಂದ ಎನ್. ಶಿವಮೊಗ್ಗ, ಬಾಲಚಂದ್ರ ಪಿ. ಮೇಸ್ತ ಶಿರಸಿ, ಚಂದ್ರಶೇಖರ್ ವಿ. ಸಾಗರ, ರಾಘವೇಂದ್ರ ಎಚ್ ಮೇಸ್ತ ಬೆಂಗಳೂರು, ನಾಗರಾಜ ವಿ. ಮೇಸ್ತ್ರ ಹೊನ್ನಾವರ, ಶ್ರೀಧರ ಜಿ. ಮೇಸ್ತ ಕುಂದಾಪುರ, ಅಕ್ಷತಾ ಆನಂದ್, ಚೇತನ್ ನಾಯ್ಕ,ಶಿರೂರು ಚಾರೋಡಿ ಮೇಸ್ತ ಸಮಾಜದ ಅಧ್ಯಕ್ಷ ಪ್ರದೀಪ್ ಎಸ್.ಮೇಸ್ತ,ಬಾಬು ಪಿ.ನಾಯಕ್,ಶೀತಲ್ ಜಿ.ಮೇಸ್ತ ಮೊದಲಾದವರು ಉಪಸ್ಥಿತರಿದ್ದರು.






ಖಜಾಂಚಿ ರಾಮನಾಥ ಪಿ.ಮೇಸ್ತ, ಶಿರೂರು ಸ್ವಾಗತಿಸಿದರು.ಸದಸ್ಯರಾದ ಕೆ. ವಿ. ಜಯರಾಮ ಸಾಗರ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಎಂ. ಸಾಗರ ವರದಿ ಮಂಡಿಸಿದರು.ನರೇಂದ್ರ ಕುಮಾರ್ ಕೋಟ ಹಾಗೂ ರಕ್ಷಿತಾ ಚಪ್ಪರಿಕೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸತೀಶ ಡಿ. ಮೇಸ್ತ ವಂದಿಸಿದರು.
ವರದಿ/ಗಿರಿ ಶಿರೂರು
Photo/ Chandra color studio Bhatkal