ಬೈಂದೂರು: ಜೆಸಿಐ ಉಪ್ಪುಂದ ಸುಪ್ರೀಮ್ ಇದರ 2026ನೇ ಸಾಲಿನ ಪದ ಪ್ರದಾನ ಕಾರ್ಯಕ್ರಮ ನಾಗೂರು ಶಾಂತೇರಿ ಕಾಮಾಕ್ಷಿ ಸಭಾ ಭವನದಲ್ಲಿ ನಡೆಯಿತು. 2026ನೇ ಸಾಲಿನ ನೂತನ ಅಧ್ಯಕ್ಷ ರವಿರಾಜ್ ಪೂಜಾರಿ ರವರಿಗೆ 2025 ಸಾಲಿನ ಅಧ್ಯಕ್ಷೆ ಜ್ಯೋತಿ ಶೆಟ್ಟಿ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಲಯ 15ರ ವಲಯಾಧ್ಯಕ್ಷ ಸಂತೋಷ ಶೆಟ್ಟಿ , ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯಮಹಾಲಿಂಗ ನಾಯ್ಕ್ ,ಮಂಜುನಾಥ ದೇವಾಡಿಗ,ಜೆಸಿಐ ಉಪ್ಪುಂದ ಸುಪ್ರೀಮ್ ಸ್ಥಾಪಕ ಅಧ್ಯಕ್ಷರು,ಹರಿಣಾಕ್ಸಿ ಕರ್ಕೆರ,ವೀಣಾ ಆಚಾರ್ಯ,ವಿಜಯ ಶೆಟ್ಟಿ ಲೇಡಿ ಜೇಸಿ ಅಧ್ಯಕ್ಷೆ ಗೀತಾ ಶೆಟ್ಟಿ, ವಿಶಾಲ ಶೆಟ್ಟಿ ಹಾಜರಿದ್ದರು.
