ಬೈಂದೂರು,ಡಿ.25: ಐತಿಹಾಸಿಕ ಪ್ರಸಿದ್ದ ಬೈಂದೂರು ಹೋಲಿಕ್ರಾಸ್‌ ಚಚ್‌ರ್ನಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಗುರುವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಉಡುಪಿ ಧರ್ಮಪ್ರಾಂತ್ಯದ ರೆ.ಪಾ ಸ್ಟೇಪನ್‌ ಫೆನಾಂರ್ಡಿಸ್‌, ಬೈಂದೂರಿನ ಧರ್ಮಗುರು ವಂದನೀಯ ವಿನ್ಸೆಂಟ್‌ ಕುವೆಲ್ಲೊ ಪ್ರಥ್ವಿ ರೋಡ್ರಿಗಸ್‌, ರಾಯಲ್‌ ನಜರತ್‌, ಒಲಿವೆರ್‌ ನಜರೆತ್‌, ಜೋಸೆಪ್‌ ರೋಡ್ರಿಗಸ್‌ ರವರ ನೇತ್ರತ್ವದಲ್ಲಿ ಬುಧವಾರ ರಾತ್ರಿ ಹಬ್ಬವನ್ನು ಶ್ರದ್ಧಾಪೂರ್ವಕವಾಗಿ ಆಚರಿಸಿ ಸಂಭ್ರಮಿಸಿದರು.ಬೆಳಿಗ್ಗೆ ಚಚ್‌ರ್ನಲ್ಲಿ ಕ್ರೈಸ್ತ ಬಾಂಧವರಿಂದ ಪೂಜಾ ವಿಧಿ ವಿಧಾನಗಳು ನಡೆಯಿತು.

ಈ ಸಂದರ್ಭದಲ್ಲಿ ನೂರಾರು ಕ್ರೈಸ್ತ ಸಮುದಾಯದ ಬಾಂಧವರು ಹಾಜರಿದ್ದರು.

ಚಿತ್ರ: ಲಾರೆನ್ಸ್ ಫೆರ್ನಾಂಡಿಸ್ ಬೈಂದೂರು (A.one Studio Shiruru) 

 

 

Leave a Reply

Your email address will not be published. Required fields are marked *

twenty + six =