ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.)ಉಪ್ಪುಂದ 19ನೇ ಮನೆ ಹಸ್ತಾಂತರ,ನಮ್ಮಲ್ಲಿರುವ ಸಂಪತ್ತಿನ ಒಂದಂಶವನ್ನು ದಾನ ಮಾಡುವುದರಿಂದ ಸಂತೃಪ್ತಿಯ ಜೊತೆಗೆ ಸೇವೆಯ ಸಾರ್ಥಕತೆ ದೊರೆಯುತ್ತದೆ;ರಮಾನಂದ ಗೌಡ

ಬೈಂದೂರು; ಮಾನವ ಧರ್ಮದಲ್ಲಿ ಹುಟ್ಟಿದ ನಾವುಗಳು ಮುಖ್ಯವಾಗಿ ಮಾನವೀಯತೆ ಮತ್ತು ಮನುಷ್ಯತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ತನ್ನ ಸಂಪಾದನೆಯ ಒಂದು ಭಾಗವನ್ನು ಬಡವರ ಅಭ್ಯುದಯಕ್ಕಾಗಿ ವಿನಿಯೋಗಿಸುತ್ತಿರುವುದು ದೇವರಿಗೂ ಪ್ರಿಯವಾದ ಕಾರ್ಯವಾಗಿದೆ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಗೋವಿಂದ ಬಾಬು ಪೂಜಾರಿ…

ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಿಯ 36ನೇ ಪ್ರತಿಷ್ಠಾ ವರ್ಧಂತ್ಯೋತ್ಸವ ಕಾರ್ಯಕ್ರಮ ಸಂಪನ್ನ

ಶಿರೂರು; ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ 36ನೇ ವರ್ಷದ ವಾರ್ಷಿಕ ಪ್ರತಿಷ್ಠಾ ವರ್ಧಂತ್ಯೋತ್ಸವ ಕಾರ್ಯಕ್ರಮ ಗುರುವಾರ ಸಂಪನ್ನಗೊಂಡಿತು. ಬೆಳಿಗ್ಗೆ ಗ್ರಾಮ ಪುರೋಹಿತರಾದ ಸುರೇಶ ಅವಭೃತ ಮುಂದಾಳತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಿತು ಹಾಗೂ ಶ್ರೀ ದುರ್ಗಾಂಬಿಕಾ ದೇವಿಯ…

ಬೈಂದೂರು; ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೈಂದೂರು: ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರು ಇದರ ವತಿಯಿಂದ ಎ.16 ರಿಂದ 24 ರ ವರೆಗೆ ನಡೆಯಲಿರುವ ಸೇನೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬುಧವಾರ ಶ್ರೀ ಸೇನೇಶ್ವರ ದೇವಸ್ಥಾನ ಬೈಂದೂರಿನಲ್ಲಿ ನಡೆಯಿತು. ಬೈಂದೂರು ಶಾಸಕ ಗುರುರಾಜ್…

ವತ್ತಿನೆಣೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ)ದಲ್ಲಿ ಹನುಮ ಜಯಂತಿ ಹಾಗೂ ಆಂಜನೇಯ ಸ್ವಾಮಿಗೆ ನೂತನ ಪ್ರಭಾವಳಿ ಸಮರ್ಪಣೆ

ಬೈಂದೂರು: ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ (ಕಿರು ಮಂತ್ರಾಲಯ) ವತ್ತಿನೆಣೆ ಬೈಂದೂರು ಇದರ ಶ್ರೀ ಹನುಮ ಜಯಂತಿ ಪ್ರಯುಕ್ತ ಶ್ರೀ ಆಂಜನೀಯ ದೇವರಿಗೆ ನೂತನವಾಗಿ ನಿರ್ಮಿಸಲ್ಪಟ್ಟ ಪ್ರಭಾವಳಿ ಸಮರ್ಪಣೆ ಹಾಗೂ ಸಾಮೂಹಿಕ ಶ್ರೀ ವಾಯುಸ್ತುತಿ ಪುನಃಶ್ಚರಣಾ ಯಾಗ ಶ್ರೀ ಗುರು ರಾಘವೇಂದ್ರ…

ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನ ಪುನರ್ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಚಪ್ಪರ ಮೂಹೂರ್ತ ಕಾರ್ಯಕ್ರಮ

ಶಿರೂರು: ಶಿರೂರಿನ ಪ್ರಸಿದ್ದ ಐತಿಹಾಸಿಕ ಹಿನ್ನೆಲೆಯ ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ಎಪ್ರಿಲ್ 02 ರಿಂದ ಎಪ್ರಿಲ್ 14 ರ ವರೆಗೆ ನಡೆಯಲಿರುವ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಚಪ್ಪರ ಮೂಹೂರ್ತ ಕಾರ್ಯಕ್ರಮ…

ಬಿಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 7ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣ ಹಸ್ತಾಂತರ

ಉಪ್ಪುಂದ; ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಿದಾಗ ಅವರ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಈ ನಿಟ್ಟಿನಲ್ಲಿ ಮಣಿಪಾಲ್ ಪೌಂಡೇಶನ್ ಸಂಸ್ಥೆ ಕಾರ್ಯಪ್ರವರ್ತವಾಗಿದೆ. ಮಣಿಪಾಲ್ ಸಂಸ್ಥೆಯು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಮಾಜಮುಖಿ ಚಿಂತನೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಬೆಂಗಳೂರು ಮಣಿಪಾಲ್…

ಬಾಕ್ಸಿಂಗ್ ನಲ್ಲಿ ಶಿಖಾ ಬಿಜೂರು ರವರಿಗೆ ಚಿನ್ನದ ಪದಕ

ಬೈಂದೂರು,ಮಾ.30: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್‌ನ ಬ್ಯಾನರ್ ಅಡಿಯಲ್ಲಿ ಗ್ಲಾಡಿಯೇಟರ್ಸ್ ಬಾಕ್ಸಿಂಗ್ ಅಕಾಡೆಮಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕುಂದಾಪುರದ ಶಿಖಾ ಬಿಜೂರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ.ಮಾ.28 ರಂದು ಬೆಂಗಳೂರಿನಲ್ಲಿ ನಡೆದ ಬಾಕ್ಸಿಂಗ್ ಚಾಂಪಿಯನ್ ಶಿಫ್ ನಲ್ಲಿ ಶಿಖಾ ಬಿಜೂರ್ ಅವರು…

ಬೈಂದೂರು: ವಿಶ್ವ ರಂಗಭೂಮಿ ದಿನಾಚರಣೆ, ರಂಗಭೂಮಿ ಕಥಾನಕಗಳ ಮೂಲಕ ವಾಸ್ತವತೆಯ ನೈಜತೆಯನ್ನು ಜಗತ್ತಿಗೆ ನೀಡುತ್ತದೆ;ಅರುಣ್ ಕುಮಾರ್ ಶಿರೂರು

ಬೈಂದೂರು: ಸುರಭಿ (ರಿ.) ಬೈಂದೂರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು ತಾಲೂಕು ಇದರ ಜಂಟಿ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಾಟಕ ವಾಚನ ಕಾರ್ಯಕ್ರಮ ರೋಟರಿ ಭವನ ಬೈಂದೂರಿನಲ್ಲಿ ನಡೆಯಿತು. ಪತ್ರಕರ್ತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೈಂದೂರು…

ಶಿರೂರು: ಶ್ರೀ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವಸ್ಥಾನ ಬಪ್ಪನಬೈಲು 11ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮ ಸಂಪನ್ನ

ಶಿರೂರು: ಶ್ರೀ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವಸ್ಥಾನ ಬಪ್ಪನಬೈಲು ಶಿರೂರು ಇದರ 11ನೇ ವರ್ಷದ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮ ರವಿವಾರ ನಡೆಯಿತು. ಬೆಳಿಗ್ಗೆ ಗ್ರಾಮ ಪುರೋಹಿತರಾದ ಸುರೇಶ ಅವಭೃತ ಇವರ ನೇತ್ರತ್ವದಲ್ಲಿ ಗುರು ಗಣೇಶ ಪೂಜೆ,ಪುಣ್ಯಾಹ,ಕಲಶ ಸ್ಥಾಪನೆ,ದೇವರಿಗೆ ತತ್ವ ಶಕ್ತಿ ಕಲಾವೃದ್ದಿ…

ಬೈಂದೂರು ಹೋಲಿಕ್ರಾಸ್‌ ಚರ್ಚಿನಲ್ಲಿ ಗರಿಗಳ ಭಾನುವಾರ ಆಚರಣೆ

ಬೈಂದೂರು: ಬೈಂದೂರಿನ ಹೋಲಿಕ್ರಾಸ್‌ ಚರ್ಚಿನಲ್ಲಿ ವಂದನೀಯ ಧರ್ಮಗುರು ವಿನ್ಸೆಂಟ್‌ ಕುವೆಲ್ಲೋ ಮತ್ತು ಸಹಾಯಕ ಧರ್ಮಗುರು ಪಿರೇರಾ ಪ್ರಥ್ವಿ ರೊಡ್ರಿಗಸ್ ರವರ ನೇತ್ರತ್ವದಲ್ಲಿ ಗರಿಗಳ ಭಾನುವಾರವನ್ನು ಹೋಲಿಕ್ರಾಸ್‌ ಚರ್ಚಿನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ನೂರಾರು ಕ್ರೈಸ್ತ ಬಾಂಧವರು ಹಾಜರಿದ್ದರು.