ಬೈಂದೂರು: ಭಜನಾ ಯಜ್ಞ ದೀಪ್ತಿ (ಸಾಂಪ್ರದಾಯಿಕ ಭಜನಾ ಸಾಹಿತ್ಯ ಬುತ್ತಿ) ಎನ್ನುವ ವಿಶೇಷ ಸಾಹಿತ್ಯಗಳನ್ನೊಳಗೊಂಡ ಭಜನಾ ಪುಸ್ತಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್,ಭಜನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು,ಉಡುಪಿ ಪ್ರಾದೇಶಿಕ ಸಮನ್ವಯಾಧಿಕಾರಿ ರವೀಂದ್ರ ಬಸ್ರೂರು,ಪೂಜ್ಯರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ,ಬೈಂದೂರು ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ರಘುರಾಮ ಕೆ.ಪೂಜಾರಿ ಶಿರೂರು,ಹಿರಿಯರಾದ ಮಂಜು ಖಾರ್ವಿ,ಈಶ್ವರ ಖಾರ್ವಿ,ಗಣಪತಿ ಪೂಜಾರಿ, ಪದಾಧಿಕಾರಿಗಳಾದ ಕೃಷ್ಣ ಪೂಜಾರಿ, ಮಂಜು ಪೂಜಾರಿ ಸಸಿಹಿತ್ಲು,ಬಾಬು ದೇವಾಡಿಗ ಉಪ್ಪುಂದ,ಮಂಜುನಾಥ ಪಡುಕೋಣೆ,ಭಜನಾ ಮಂಡಳಿಗಳ ಸದಸ್ಯರು ಹಾಗೂ ಕಮ್ಮಟದ ಶಿಬಿರಾರ್ಥಿಗಳು ಹಾಜರಿದ್ದರು.
