ಬೈಂದೂರು: ಉಡುಪಿ ಜಿಲ್ಲೆಯಲ್ಲಿ ಅತ್ಯಂತ ದೀರ್ಘ ರೈತರ ಹೋರಾಟ ಬೈಂದೂರಿನಲ್ಲಿ ನಡೆಯುತ್ತಿದೆ.ಪಕ್ಷಾತೀತ ಹೋರಾಟದಲ್ಲಿ ಎಲ್ಲಾ ಮುಖಂಡರು,ಜನಪ್ರತಿನಿಧಿಗಳು ಭಾಗವಹಿಸಿ ಬೆಂಬಲ ನೀಡಿದ್ದಾರೆ.ನೂರು ದಿನಗಳಿಂದ ರೈತರು ಹೊಲಗದ್ದೆ, ಕೆಲಸ ಕಾರ್ಯ ಬಿಟ್ಟು ಬೀದಿಯಲ್ಲಿ ಪ್ರತಿಭಟನೆ ನಿರತರಾಗಿ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.ಇಂದಿನಿಂದ ಬೆಳಗಾಂ ಚಳಿಗಾಲದ ಅಧಿವೇಶನದಲ್ಲಿ ಬೈಂದೂರು ಗ್ರಾಮೀಣ ಭಾಗದ ಜನರ ಸಮಸ್ಯೆ ಕುರಿತು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಯವರು ಸದನದಲ್ಲಿ ಧ್ವನಿ ಎತ್ತಬೇಕೆಂದು ಬೈಂದೂರು ಭಾಗದ ರೈತರು ವಿನಂತಿಸಿದ್ದಾರೆ.

ಬೈಂದೂರು ರೈತ ಸಂಘದ ನೇತ್ರತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಶಾಸಕರು ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.ಮಾತ್ರವಲ್ಲದೆ ಪಕ್ಷದ ವತಿಯಿಂದ ಶಾಸಕರ ನೇತ್ರತ್ವದಲ್ಲಿ ಪ್ರತಿಭಟನೆ ಕೂಡ ನಡೆಸಿದ್ದಾರೆ.79 ದಿನಗಳಿಂದ ರೈತರು ಬೀದಿಯಲ್ಲಿದ್ದಾರೆ.ರೈತರ ಹೋರಾಟಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ.ಆದರೆ ಅಧಿಕಾರಿಗಳು ಸಾಕಷ್ಟು ವಿಳಂಬ ಮಾಡುತ್ತಿರುವುದು ರೈತರಿಗೆ ಸಮಸ್ಯೆಯಾಗಿದೆ.ಆದುದರಿಂದ ಶಾಸಕರು ಈ ಕುರಿತು ಸದನದಲ್ಲಿ ಧ್ವನಿ ಎತ್ತುವ ಮೂಲಕ ಬೈಂದೂರು ಭಾಗದ ರೈತರ ಪರ ಧ್ವನಿಯಾಗಬೇಕು ಎಂದು ಒತ್ತಾಯಿಸಿದ್ದಾರೆ. ನಗರಾಭಿವೃದ್ದಿ ಸಚಿವರು ತಕ್ಷಣ ಸಂಪುಟ ಸಭೆಗೆ ತರಲು ನಿರ್ದೇಶನ ನೀಡಿದರು ಸಹ ಅಧಿಕಾರಿಗಳಿಂದ ವಿಳಂಬ ಆಗುತ್ತಿದೆ.ಹೀಗಾಗಿ ಸದನದಲ್ಲಿ ಧ್ವನಿಯಾಗುವ ಮೂಲಕ ಬೈಂದೂರು ರೈತರ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕೆಂದು ವಿನಂತಿಸಿದ್ದಾರೆ ಮತ್ತು ಶಾಸಕರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಬೆಳಕು ಚೆಲ್ಲುವ ವಿಶ್ವಾಸ ರೈತರಿಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

fourteen − 9 =