ಬೈಂದೂರು: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಗುರುವಾರ ಇಬ್ಬರು ಮಕ್ಕಳನ್ನು ರೈಲ್ವೆ ರಕ್ಷಣಾ ದಳದ ಪೊಲೀಸರು ರಕ್ಷಿಸಿದ್ದು, ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ಗೋವಾದ ಶಾಲಾ ಹಾಸ್ಟೆಲ್‌ನಿಂದ ತಪ್ಪಿಸಿಕೊಂಡು ಬಂದಿದ್ದ 13 ವರ್ಷದ ಬಾಲಕ ಮಂಗಳೂರು ಎಕ್ಸ್‌ಪ್ರೆಸ್ ರೈಲು ಸಂಖ್ಯೆ 12133 ರಲ್ಲಿ ಪ್ರಯಾಣಿಸುತ್ತಿರುವುದನ್ನು ಗಮನಿಸಿದ ಟಿಕೆಟ್ ಪರಿಶೀಲನಾಧಿಕಾರಿ ಶಿರೂರಿನ ರಾಘವೇಂದ್ರ ಶೆಟ್ಟಿ ಆತನನ್ನು ವಿಚಾರಿಸಿದ್ದಾರೆ. ಬಾಲಕ ಸರಿಯಾಗಿ ಮಾಹಿತಿ ನೀಡದೆ ಇದ್ದಾಗ ಆತನ ಬ್ಯಾಗ್‌ನಲ್ಲಿದ್ದ ಶಾಲಾ ಗುರುತಿನ ಚೀಟಿ ಆಧಾರದಲ್ಲಿ ಶಾಲೆಯನ್ನು ಸಂಪರ್ಕಿಸಿದಾಗ ಆತ ಹಾಸ್ಟೆಲ್‌ನಿಂದ ತಪ್ಪಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಮಧ್ಯಾಹ್ನ ಗೋವಾದಿಂದ ಉಡುಪಿಗೆ ಆಗಮಿಸಿದ ಆತನ ಸಂಬಂಧಿಕರು ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ತಂದೆ ಬೈದರೆಂದು ಬೇಸರ ಮಾಡಿಕೊಂಡು ಕೊಪ್ಪದಿಂದ ಉಡುಪಿಗೆ ಬಂದಿದ್ದ ಭೋಪಾಲ್ ಮೂಲದ 16 ಹರೆಯದ ಹುಡುಗಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ಮಧ್ಯಪ್ರದೇಶಕ್ಕೆ ಹೋಗುವ ರೈಲಿನ ಬಗ್ಗೆ ವಿಚಾರಿಸುತ್ತಿದ್ದಳು. ಅನುಮಾನಗೊಂಡ ರೈಲ್ವೆ ಪೊಲೀಸರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿ, ಬಾಲಕಿಯನ್ನು ರಕ್ಷಿಸಿ ಕಾನೂನು ಪ್ರಕ್ರಿಯೆಗಾಗಿ ಹಸ್ತಾಂತರಿಸಿದರು. ಬಾಲಕಿಗೆ ನಿಟ್ಟೂರಿನ ಬಾಲಕಿಯನ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಬಾಲಕನನ್ನು ರಕ್ಷಿಸಿದ ರಾಘವೇಂದ್ರ ಶೆಟ್ಟಿ ಅವರಿಗೆ ಕೊಂಕಣ -ಕಾರ್ಪೋರೇಷನ್ ಲಿಮಿಟೆಡ್‌ನ ಸಿಎಂಡಿ ಸಂತೋಷ್ ಕುಮಾರ್ ಅವರು 5 ಸಾವಿರ ರೂ. ಬಹುಮಾನ ನೀಡಿ ಶ್ಲಾಘಿಸಿz