ಬೈಂದೂರು: ಸುರಭಿ(ರಿ.) ಬೈಂದೂರು ಇದರ ವತಿಯಿಂದ ರಜತ ವರ್ಷದ ಪ್ರಯುಕ್ತ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ಕನ್ನಡ ನುಡಿ ಹಬ್ಬ ಕಾರ್ಯಕ್ರಮ ನ.20 ರಂದು ಸಂಜೆ 6 ಗಂಟೆಗೆ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆಯಲಿದೆ.ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಅರುಣಾ ರಾವ್ ಮತ್ತು ಪ್ರಜ್ಞಾ ರಾವ್ ಕಟೀಲು ಹಾಗೂ ತಂಡದವರಿಂದ ಕನ್ನಡ ಗಾನಾರ್ಪಣೆ ಕನ್ನಡ ಗೀತೆಗಳ ಸಮಾಗಮ ನಡೆಯಲಿದೆ ಹಾಗೂ ಸುರಭಿ ಬಾಲ ಕಲಾವಿದರಿಂದ ನೃತ್ಯಾರ್ಪಣೆ ನಡೆಯಲಿದೆ ಎಂದು ಸುರಭಿ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.