ಬೈಂದೂರು: ಶ್ರೀ ಚೆನ್ನಪ್ಪಯ್ಯನತೊಪ್ಪಲು ನಾಗಬನ ಕರಾವಳಿ ಶಿರೂರು ಇದರ ಕಾತಿ೯ಕ ಮಾಸದ ವಾರ್ಷಿಕ ಮಂಗಳ ಭಜನಾ ಕಾರ್ಯಕ್ರಮ ಶನಿವಾರ ಸಂಭ್ರಮ ಸಡಗರದಿಂದ ನಡೆಯಿತು.ವಾರ್ಷಿಕ ಭಜನೆ ಪ್ರಯುಕ್ತ ಭಜನಾ ಸಮಿತಿಯ ಹಿರಿಯ ಸದಸ್ಯರಾದ ನಾಣು ಬಿಲ್ಲವ ಆರ್‍ಮಾರಹಿತ್ಲು, ಹೆರಿಯಣ್ಣ ಮೊಗವೀರ ಹಾಗೂ ಭಜನೆಯ ಧಾರ್ಮಿಕ ಸೇವಾಕರ್ತರಾದ ರವಿದಾಸ್ ಮೊಗೇರ್ ರವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ನಾಗಪ್ಪ ಮೊಗೇರ್ ಕರಾವಳಿ,ಮಹೇಂದ್ರ ಬಿಲ್ಲವ,ರಾಮ ಟೈಲರ್,ಅರುಣ್ ಕುಮಾರ್ ಶಿರೂರು,ಯುವಶಕ್ತಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯಶವಂತ ಬಿಲ್ಲವ,ಯುವಶಕ್ತಿ ಉತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗೇರ್,ಮಹೇಶ್ ಮೊಗೇರ್,ರಮೇಶ ಮೊಗೇರ್ ಕರಾವಳಿ,ಕಾರ್ಯದರ್ಶಿ ವಿಠ್ಠಲ ಬಿಲ್ಲವ,ಹಿರಿಯ ಭಜನಾ ಹಾಡುಗಾರರಾದ ರಾಮ ಪೂಜಾರಿ ಕೊಟ್ಟಿಗೆಮನೆ,ಗಣಪ ಮೊಗವೀರ ಹಾಗೂ ಸಮಿತಿಯ ಸರ್ವ ಸದಸ್ಯರು ಹಾಜರಿದ್ದರು.

ನಾಲ್ಕಕ್ಕೂ ಅಧಿಕ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು.