ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಹಳ್ಳಿಭಾಗಗಳನ್ನು ಸೇರಿಸುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ.ರೈತರ ಹೋರಾಟ ನ್ಯಾಯಯುತವಾಗಿದೆ.ಈ ಹಿಂದೆ ಪುರಸಭೆ ಇದ್ದಾಗ ಐ. ಎಮ್ ಜಯರಾಮ್ ಶೆಟ್ಡಿಯವರು ಶಾಸಕರಾಗಿದ್ದ ಸಂಧರ್ಭ ವಿಶೇಷ ಜನಸಭೆ ಕರೆದು ನಿರ್ಣಯ ಕೈಗೊಂಡು ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಗ್ರಾಮ ಪಂಚಾಯತ್ ಆಗಿ ಪರಿವರ್ತನೆ ಮಾಡಲಾಯಿತು.ಈ ಹೋರಾಟ ಪಕ್ಷಾತೀತವಾಗಿ ನಡೆಯುತ್ತಿದ್ದು ಎಲ್ಲಾ ನಾಯಕರು ರಾಜಕೀಯ ಮರೆತು ನ್ಯಾಯ ಒದಗಿಸಿಕೊಡಬೇಕು.ಈ ಹೋರಾಟಕ್ಕೆ ಕ್ಷೇತ್ರದ ಸಮಸ್ತ ರೈತರ ಸಹಕಾರ ಇದೆ.ಸರಕಾರದಿಂದ ಕೇವಲ ಭರವಸೆ ಸಾಲದು.ಸ್ಪಷ್ಟ ಆದೇಶ ಸಿಗುವ ವರಗೆ ಹೋರಾಟ ನಿಲ್ಲದು ಮತ್ತು ಇದಕ್ಕೆ ಪೂರ್ಣ ಸಹಕಾರ ಇದೆ ಎಂದು ಟಿ.ನಾರಾಯಣ ಹೆಗ್ಡೆ ಹೇಳಿದರು ಅವರು 19 ನೇ ದಿನದ ಧರಣಿ ನೇತ್ರತ್ವ ವಹಿಸಿ ಮಾತನಾಡಿ ಇಂದಿನ ಧರಣಿಗೆ ತಗ್ಗರ್ಸೆ ಭಾಗದ ನೂರಾರು ರೈತರು ಭಾಗವಹಿಸಿದ್ದರು.ಕುಂಜಳ್ಳಿ ಭಾಗದ ರೈತರು ತಾಲೂಕು ಆಡಳಿತ ಸೌಧದ ಎದುರು ಟ್ರಾಕ್ಟರ್ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಮಾತನಾಡಿ ರೈತರ ಹೋರಾಡ ಚಳುವಳಿಯಾಗಿ ಬೆಳೆಯುತ್ತಿದೆ ಇದು ರಾಜಕೀಯ ರಹಿತ ಹೋರಾಟ .ಇದು ರೈತರ ನ್ಯಾಯದ ಆಗ್ರಹ.ಫೇಸ್ ಬುಕ್, ವಾಟ್ಸಾಪ್ ನಲ್ಲಿ ಅಪಪ್ರಚಾರ ಮಾಡುವವರು ತಾಕತ್ತಿದ್ದರೆ ಈ ವೇದಿಕೆಗೆ ಬನ್ನಿ ಉತ್ತರ ಕೊಡ್ತೇವೆ ಅದು ಬಿಟ್ಟು ನಿಮ್ಮ ನಾಟಕ ಬೇಡ ಸಾದ್ಯ ಇದ್ದರೆ ಈ ವೇದಿಕೆಗೆ ಬಂದು ರೈತರ ಜೊತೆ ಸಹಕರಿಸಿ ಎಂದರು.
ಕ್ರಷ್ಣ ದೇವಾಡಿಗ ರವಿ ಗಾಣಿಗ ಹೆರಿಯಣ್ಣಶೆಟ್ಟಿ, ರವಿಂದ್ರ ಶೆಟ್ಟಿ, ಮ್ಯಾಥ್ಯೂ, ನಾಗಪ್ಪ ಮರಾಠಿ ಮುಂತಾವರು ಹಾಜರಿದ್ದರು.

ವೀರಭದ್ರ ಗಾಣಿಗ ಸ್ವಾಗತಿಸಿದರು. ಅರುಣ ಕುಮಾರ ಶಿರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವರದಿ/ಗಿರಿ ಶಿರೂರು