ಬೈಂದೂರು: ಕಳೆದ ಹದಿನೈದು ದಿನಗಳಿಂದ ನೂರಾರು ರೈತರು ಶಾಂತರೀತಿಯಲ್ಲಿ ಧರಣಿ ನಡೆಸುತ್ತಿದ್ದಾರೆ.ಕೃಷಿ ಕೆಲಸ ಕಾರ್ಯ ಎಲ್ಲ ಬಿಟ್ಟು ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ಕುಳಿದ್ದರು ಜಿಲ್ಲಾಡಳಿತ ಜಾಣ ಕುರುಡಾದಂತೆ ವರ್ತಿಸುತ್ತಿದೆ ಇನ್ನು ನಮ್ಮ ರೈತರ ತಾಳ್ಮೆ ಪರೀಕ್ಷೆ ಸಹಿಸಲ್ಲ.ಬುಧವಾರದಿಂದ ನಮ್ಮ ಉಗ್ರ ಹೊರಾಟ ರೈತರ ರಣ ಕಹಳೆ ಮೊಳಗಲಿದೆ ಎಂದು ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ಹೇಳಿದರು ಅವರು ಸೋಮವಾರ ಹದಿನೈದನೆ ದಿನದ ಧರಣಿ ಉದ್ದೇಶಿಸಿ ಮಾತನಾಡಿ ನಮ್ನದು ನ್ಯಾಯಪರ ಹೋರಾಟ ಇಲಾಖೆ ಹದಿನೈದು ದಿನದಿಂದ ಕಣ್ಮುಚ್ಚಿ ಕುಳಿತಿದೆ ಇಷ್ಟು ದಿನ ಹಳ್ಳಿ ಭಾಗದ ಮುಖಂಡರು ಮಾತ್ರ ಧರಣಿಯಲ್ಲಿ ಭಾಗವಹಿಸುತ್ತಿದ್ದರು ಇನ್ನು ಮುಂದೆ ಹಳ್ಳಿಯ ಮಕ್ಕಳು ಮಹಿಳೆಯರು ಸೇರಿ ಎಲ್ಲರು ಬಂದು ನ್ಯಾಯ ಕೇಳುತ್ತೇವೆ ನೀವು ನ್ಯಾಯ ನೀಡದಿದ್ದರೆ ಊಟ ತಿಂಡಿ ಬಿಟ್ಟು ತಾಲೂಕು ಆಡಳಿತ ಸೌಧದ ಎದುರು ಜಮಾಯಿಸುತ್ತೆವೆ ಎಂದರು.
ಈ ಸಂದರ್ಭದಲ್ಲಿ ಅರವಿಂದ ಪೂಜಾರಿ ನಾಡ,ಮ್ಯಾಥ್ಯೂ ಕೆ.ಎಸ್,ಜಗದೀಶ ದೇವಾಡಿಗ,ಕೃಷ್ಣ ದೇವಾಡಿಗ, ,ನಾರಾಯಣ ಅಳ್ವೆಗದ್ದೆ, ರಘುರಾಮ ಕೆ.ಪೂಜಾರಿ,ಮಹಾದೇವ ಕಿಸ್ಮತ್ತಿ,ಕೇಶವ ಪೂಜಾರಿ ಅಂತಾರ್,ಸುಭಾಷ್ ಗಂಗನಾಡು,ಗಣಪ ಗಂಗನಾಡು,ಮಾಣಿ ಕೊಸಳ್ಳಿ,ಪೌಲೋಸ್ ಗಂಗನಾಡು,ಹೆರಿಯ ಪೂಜಾರಿ ಗೋಳಿಬೇರು ಮೊದಲಾದವರು ಹಾಜರಿದ್ದರು.

ವಾಸುದೇವ ಮರಾಠಿ ಸ್ವಾಗತಿಸಿದರು.ಅರುಣ್ ಕುಮಾರ್ ಶಿರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ನಾಗಪ್ಪ ಮರಾಠಿ ಹೊಸೂರು ಕಾರ್ಯಕ್ರಮ ನಿರ್ವಹಿಸಿದರು.
ವರದಿ/ಗಿರಿ ಶಿರೂರು