ಬೈಂದೂರು: ಕಳೆದ ಹದಿನೈದು ದಿನಗಳಿಂದ ಗ್ರಾಮೀಣ ಭಾಗಗಳನ್ನು ಪಟ್ಟಣ ಪಂಚಾಯತ್ ವ್ಯಾಪ್ತಿಯಿಂದ ಕೈಬಿಡಬೇಕು ಆಗ್ರಹಿಸಿ ರೈತ ಸಂಘ ನಡೆಸುತ್ತಿರುವ ಪ್ರತಿಭಟನೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಬೇಟಿ ನೀಡಿದರು.ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ ಜಿಲ್ಲಾಡಳಿತದ ವೈಪಲ್ಯದಿಂದ ರೈತರಿಗೆ ತೊಂದರೆಯಾಗುತ್ತಿದೆ ಮತ್ತು ವಾಸ್ತವತೆ ಕುರಿತು ಮಾಹಿತಿ ನೀಡಿದರು.ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ ಜಿಲ್ಲಾಡಳಿತದ ಪರವಾಗಿ ನಾನು ರೈತರನ್ನು ಬೇಟಿ ಆಗಲು ಬಂದಿದ್ದೇನೆ.ರೈತರ ಹೋರಾಟ ನ್ಯಾಯಯುತವಾಗಿದೆ.ಜಿಲ್ಲಾಡಳಿತ ರೈತರ ಬೇಡಿಕೆಗಳನ್ನು ಈಡೇರಿಸಲು ಪೂರ್ಣ ಪ್ರಮಾಣದಲ್ಲಿ ಸಮ್ಮತ್ತಿ ಇದೆ ಮತ್ತು ಈ ಕುರಿತು 11 ವಾರ್ಡ್‌ಗಳ ವರದಿ ಸಿದ್ದಪಡಿಸಿದೆ.ಆದರೆ ಬೈಂದೂರು ಕ್ಷೇತ್ರದ ಎರಡು ಮುಖಂಡರ ನಡುವೆ ದ್ವಂದ್ವತೆ ಇದೆ.ಹೀಗಾಗಿ ಮೂರು ಅಭಿಪ್ರಾಯದ ಗೊಂದಲವಿದೆ.ಒಟ್ಟಾರೆ ೧೩ ವಾರ್ಡ್‌ಗಳನ್ನು ಸೇರಿಸಬೇಕು ಎನ್ನುತ್ತಾರೆ.ಇನ್ನೋಬ್ಬರು 13 ವಾಡ್೯ಗಳನ್ನು ಸೇರಿಸಬೇಕು ಎನ್ನುವ ಒತ್ತಡ ಹೀಗಾಗಿ ಮೂರು ಅಭಿಪ್ರಾಯಗಳ ಗೊಂದಲದಲ್ಲಿ ಜಿಲ್ಲಾಡಳಿತದಿಂದ ವಿಳಂಬ ಆಗಿದೆ ಎಂದರು.ಈ ಸಂದರ್ಭದಲ್ಲಿ ಉತ್ತರಿಸಿದ ರೈತರು ಗೊಂದಲ ಇರುವುದು ನಾಯಕರ ಪ್ರತಿಷ್ಟೆಯಲ್ಲಿ ಹೀಗಾಗಿ ನಾವು ಅವರ ಗೊಂದಲಗಳ ಬಗ್ಗೆ ಮಾತನಾಡುವುದಿಲ್ಲ ನಮಗೆ ಯಾವುದು ಮಾಡಿದರು ಸಮ್ಮತಿ ಇದೆ.ಇಲ್ಲವಾದರೆ ಪಟ್ಟಣ ಪಂಚಾಯತ್ ತೆಗೆದು ಗ್ರಾಮ ಪಂಚಾಯತ್ ಮಾಡಿದರೆ ಇನ್ನು ಉತ್ತಮ.ಹೀಗಾಗಿ ಈಗಾಗಲೇ ಜಿಲ್ಲಾಡಳಿತ ಸಿದ್ದಪಡಿಸಿದ ವರದಿಯನ್ನು ಅಂತಿಮಗೊಳಿಸಬೇಕು ಎಂದು ಆಗ್ರಹಿಸಿದರು.ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಈ ವಿಚಾರದ ತಿಳಿಸುವುದಾಗಿ ತಿಳಿಸಿದರು.ಒಟ್ಟಾರೆಯಾಗಿ ನಾಯಕರ ನಡುವಿನ ಪ್ರತಿಷ್ಠೆ ರೈತರ ನ್ಯಾಯಕ್ಕೆ ವಿಳಂಬವಾಗುತ್ತಿರುವುದು ಸ್ಪಷ್ಟವಾಗಿದೆ.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಅರುಣ್ ಕುಮಾರ್ ಶಿರೂರು,ವೀರಭದ್ರ ಗಾಣಿಗ,ಕೃಷ್ಣ ದೇವಾಡಿಗ,ಮ್ಯಾಥ್ಯೂ ಕೆ.ಎಸ್,ಉದಯ ಮಾಕೋಡಿ,ಅನೀಶ್ ಕುಮಾರ್,ನಾಗಪ್ಪ ಮರಾಠಿ,ಮಹಾದೇವ ಕಿಸ್ಮತ್ತಿ,ಲಿಮೋನ್ ಬೈಂದೂರು,ಸನ್ನಿ ಫಾದರ್ ಹಾಗೂ ರೈತ ಮುಖಂಡರು ಹಾಜರಿದ್ದರು.
ವರದಿ/ಗಿರಿ ಶಿರೂರು