ಬೈಂದೂರು: ರೈತ ಸಂಘ ಬಂದೂರು ಇದರ ವತಿಯಿಂದ ಕಳೆದ 12 ದಿನಗಳಿಂದ ಬೈಂದೂರು ತಾಲೂಕು ಆಡಳಿತದ ಎದುರು ನಡೆಯುತ್ತಿರುವ ಅನಿಧಿ೯ಷ್ಟಾವಧಿ ಧರಣಿ ಸ್ಥಳಕ್ಕೆ ಕುಂದಾಪುರ ಸಹಾಯಕ ಕಮಿಷನರ್ ರಶ್ಮೀ ಶುಕ್ರವಾರ ಬೇಟಿ ನೀಡಿದರು. ರೈತರ ಬೇಡಿಕೆಗಳನ್ನು ಆಲಿಸಿ ಮಾತನಾಡಿದ ಅವರು ಈಗಾಗಲೇ ಬೈಂದೂರು ತಾಲೂಕು ರೈತ ಸಂಘದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ.ಜಿಲ್ಲಾಡಳಿತ ಈಗಾಗಲೇ ಇದರ ವಾಸ್ತವತೆ ಕುರಿತು ವರದಿ ನೀಡಲಾಗಿತ್ತು.ಗ್ರಾಮೀಣ ಭಾಗಗಳನ್ನು ಕೈಬಿಡುವಂತೆ ರೈತ ಸಂಘಟನೆ ನಡೆಸುತ್ತಿರುವ ಹೋರಾಟದ ಮಾಹಿತಿ ಮತ್ತು ಜಿಲ್ಲಾಡಳಿತ ವರದಿಯನ್ನು ಶೀಘ್ರ ಸರಕಾರಕ್ಕೆ ಮುಟ್ಟಿಸುವಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಹೀಗಾಗಿ ಜಿಲ್ಲಾಧಿಕಾರಿಗಳ ನಿರ್ದೇಶನದೊಂದಿಗೆ ಜಿಲ್ಲಾಡಳಿತ ರೈತರಿಗೆ ಪೂರಕವಾಗಿ ಸ್ಪಂಧಿಸಲಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ರಾಮಚಂದ್ರಪ್ಪ,ಅರವಿಂದ ಪೂಜಾರಿ ನಾಡ,ಫಾದರ್ ಸನ್ನಿ, ಲಿಮೋನ್ ಬೈಂದೂರು,ದಿವಾಕರ ಶೆಟ್ಟಿ ನೆಲ್ಲಾಡಿ,ಅರುಣ್ ಕುಮಾರ್ ಶಿರೂರು,ವೀರಭದ್ರ ಗಾಣಿಗ ಹಾಗೂ ವಿವಿಧ ರೈತ ಮುಖಂಡರು ಹಾಜರಿದ್ದರು.
