ಬೈಂದೂರು: ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಭಾಗದ ರೈತರು ನಿರಂತರ ಹೋರಾಟ ನಡೆಸುತ್ತಿದ್ದು ಬಂದೂರು ರೈತ ಸಂಘದ ನೇತ್ರತ್ವದಲ್ಲಿ ಅನಿ೯ಧಿಷ್ಟಾವಧಿ ಧರಣಿ ನಡೆಯುತ್ತಿದೆ.ಬೈಂದೂರು ಕ್ಷೇತ್ರದಲ್ಲಿ ಐದು ವರ್ಷದಿಂದ ಈ ಸಮಸ್ಯೆ ಕಾಡುತ್ತಿದೆ. ಗುರುರಾಜ ಗಂಟಿಹೊಳೆ ಶಾಸಕರಾಗಿ ಎರಡುವರೆ ವರ್ಷ ಕಳೆದಿದೆ.ಸದನದಲ್ಲಿ ಒಂದೆ ಒಂದು ದಿನ ಈವಿಷಯದ ಬಗ್ಗೆ ಬೆಳಕು ಚೆಲ್ಲಿಲ್ಲ. ಈಗ ರೈತರ ಹೋರಾಟ ಯಶಸ್ಸು ಕಾಣುತ್ತಿದೆ ಎಂದು ಅರಿವಾಗುತ್ತಿದ್ದಂತೆ ರಾಜಕೀಯ ಲಾಭ ಪಡೆಯಲು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ.ಬೈಂದೂರು ಶಾಸಕರಿಗೆ ಇಂತಹ ನಾಟಕದ ಪ್ರತಿಭಟನೆಯ ನೈತಿಕತೆ ಜನರಿಗೆ ತಿಳಿಸಲಿ ಎಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ನಾಡ ಹೇಳಿದರು.ಆವರು ಶುಕ್ರವಾರ ಬೈಂದೂರು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾಧ್ಯಮದವರೊಂದಿಗೆ ಮಾತನಾಡಿ ರೈತರ ವಿಚಾರದಲ್ಲಿ ನಾವು ರಾಜಕೀಯ ಮಾಡಿಲ್ಲ.ನಿಜವಾಗಿಯೂ ಪ್ರತಿಭಟನೆ ಕಾಂಗ್ರೆಸ್ ಪಕ್ಷದವರು ಮಾಡಬೇಕಿತ್ತು.ಕಾರಣ ಎಂದರೆ ಬಿಜೆಪಿ ಆವಧಿಯಲ್ಲಿ ಬೈಂದೂರಿನಲ್ಲಿ ಪಟ್ಟಣ ಪಂಚಾಯತ್ ಆಗಿದ್ದು.ಈಗಿನ ಶಾಸಕರು ಯಾರ ವಿರುದ್ದ ಪ್ರತಿಭಟನೆ ಮಾಡುತ್ತಾರೆ ಎಂದೆ ತಿಳಿಯುತ್ತಿಲ್ಲ. ನಾವು ಈ ವಿಚಾರದಲ್ಲಿ ರಾಜಕೀಯವಾಗಿ ತೆಗೆದುಕೊಂಡಿಲ್ಲ. ರೈತರಿಗೆ ನ್ಯಾಯ ನೀಡಬೇಕಾದರೆ ಎಲ್ಲರೂ ಒಟ್ಟಾಗಿ ಪ್ರಯತ್ನಿಸಬೇಕು.ಶಾಸಕರು ಪ್ರಚಾರದ ಉದ್ದೇಶದಿಂದ, ರಾಜಕೀಯದ ಲಾಭದ ಉದ್ದೇಶದಿಂದ ಪ್ರತಿಭಟನೆ ಸಿದ್ದ ಮಾಡಿದ್ದು ರೈತರಿಗೆ ಮಾಡಿದ ಅನ್ಯಾಯವಾಗಿದೆ.ಒಂದೊಮ್ಮೆ ಅಷ್ಟು ಹೋರಾಟದ ಸಹಕಾರ ಇದ್ದರೆ ರೈತರ ಜೊತೆ ಧರಣಿ ಕುಳಿತು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಬಹುವುದಿತ್ತು.ಆದರೆ ಒಬ್ಬ ಶಾಸಕರು ಯಾವ ಕೆಲಸ ಮಾಡಬೇಕು ಅದನ್ನು ಮಾಡುತ್ತಿಲ್ಲ.ರಾಜಕೀಯ ನಾಟಕ, ಪ್ರಚಾರದ ಲಾಭ, ರೈತರ ವಿಷಯದಲ್ಲಿ ಸಲ್ಲದು. ಶಾಸಕರ ಪ್ರತಿಭಟನೆ ರೈತರಿಗೆ ದೊರೆಯುವ ನ್ಯಾಯಕ್ಕೆ ಕೊಡಲಿ ಹಾಕುವ ಪ್ರಯತ್ನ ಎಂದರು.
ಕಳೆದ ಹದಿನೈದು ದಿನಗಳಿಂದ ರೈತರು ಹೊಲಗದ್ದೆ, ಊಟ,ನಿದ್ರೆ ಬಿಟ್ಟು ಧರಣಿ ನಡೆಸುತ್ತಿದ್ದಾರೆ.ತಮ್ಮ ಸ್ವಂತಃ ಖರ್ಚಿನಲ್ಲಿ ರೈತರು ನಿರಂತರ ಧರಣಿ ನಡೆಸುತ್ತಿದ್ದಾರೆ.ಆದರೆ ಶಾಸಕರು ಊರ ತುಂಬಾ ಪ್ಲೆಕ್ಸ್ ಹಾಕಿ ತಮ್ಮ ಭಾವಚಿತ್ರದ ಪ್ರದರ್ಶನ ಮಾಡುವುದು ಸೂತಕದ ಮನೆಯಲ್ಲಿ ಸಂಭ್ರಮಿಸಿದಂತಿದೆ.ಹೀಗಾಗಿ ಜನರಿಗೆ ತಪ್ಪು ಮಾಹಿತಿ ನೀಡಬೇಡಿ.ಶಾಸಕರಾಗಿ ಜವಬ್ದಾರಿಯುತ ಸ್ಥಾನದಲ್ಲಿರುವ ನೀವು ಮಗುವಿಗೆ ಚಿವುಟುವುದು ನೀವೆ ಹಾಲು ಕೊಡುವುದು ನೀವೆ ಎನ್ನುವಂತಾಗಿದೆ.ಹೀಗಾಗಿ ರೈತರ ವಿಷಯದಲ್ಲಿ ರಾಜಕಾರಣ ಮಾಡದೆ ರೈತರ ಹೋರಾಟಕ್ಕೆ ಕೈಜೋಡಿಸಬೇಕು ಎಂದರು.
ಶಾಸಕರ ಪ್ರತಿಭಟನೆ ಕಾಂಗ್ರೆಸ್ ನಿಲುವಿನ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾವು ಈ ವಿಷಯದಲ್ಲಿ ರಾಜಕೀಯ ತರುವುದಿಲ್ಲ.ಮಾಜಿ ಶಾಸಕರು ಈಗಾಗಲೇ ಬೆಂಗಳೂರಿನಲ್ಲಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳನ್ನು ಬೇಟಿ ಮಾಡಿದ್ದಾರೆ.ಉಸ್ತುವಾರಿ ಸಚಿವರು ಕೂಡ ಈ ಬಗ್ಗೆ ಪ್ರಯತ್ನಿಸುತ್ತಿದ್ದು ಆದಷ್ಟು ಶೀಘ್ರ ರೈತರಿಗೆ ನ್ಯಾಯ ಒದಗಿಸಿಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭಲ್ಲಿ ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಸದಾಶಿವ ಡಿ.ಪಡುವರಿ ಹಾಗೂ ನಾಗರಾಜ ಗಾಣಿಗ ಬಂಕೇಶಶ್ವರ ಹಾಜರಿದ್ದರು.