ಶಿರೂರು; ಶಿರೂರು ಅಸೋಸಿಯೇಷನ್ ಇದರ ವತಿಯಿಂದ ಶಿರೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ 3 ಕಂಪ್ಯೂಟರ್ಗಳನ್ನು ಕೊಡುಗೆಯಾಗಿ ನೀಡಲಾಯಿತು.ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಗಣಕ ವಿಜ್ಞಾನ ವಿಷಯ ಆರಂಭಿಸಿದ್ದು ಎಮ್.ಎಮ್.ಫೌಂಡೇಶನ್ ಇದರ ವತಿಯಿಂದ 5 ಕಂಪ್ಯೂಟರ್ ಹಾಗೂ ಶಿರೂರು ಅಸೋಸಿಯೇಷನ್ ವತಿಯಿಂದ 3 ಕಂಪ್ಯೂಟರ್ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿರೂರು ಅಸೋಸಿಯೇಷನ್ ಆಧ್ಯಕ್ಷ ಮುನಾಫ್ ಶಿರೂರು ಪದವಿ ಪೂರ್ವ ಕಾಲೇಜು ಅತ್ಯಂತ ಹಿರಿಯ ಶೈಕ್ಷಣಿಕ ಸಂಸ್ಥೆಯಾಗಿದ್ದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದಿದ್ದಾರೆ.ಇತ್ತೀಚೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಉತ್ತಮ ಸೌಲಭ್ಯ ದೊರಕಿಸುವ ಉದ್ದೇಶದಿಂದ ದಾನಿಗಳ ನೆರವಿನಿಂದ ಕಂಪ್ಯೂಟರ್ಗಳನ್ನು ಕೊಡುಗೆಯಾಗಿ ನೀಡಲಾಗಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ,ಕಾವಾ ರಿಯಾಜ್,ಬುಸಿ ರಹಮತುಲ್ಲಾ,ನೇಜಿ ಖಾಲಿದ್,ಅಬ್ದುಲ್ ಖಾಲಿಕ್,ಪತ್ರಕರ್ತ ಅರುಣ್ ಕುಮಾರ್ ಶಿರೂರು,ಬುಡ್ಡು ಉಬದುಲ್ಲಾ,ಮಕ್ಳೆ ಯಾಸೀನ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.
News/Giri Shiruru