ಬೈಂದೂರು: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೈಂದೂರು ಘಟಕ ಇದರ ವತಿಯಿಂದ ಸಾಹಿತ್ಯಾಸಕ್ತರ ಸಭೆ ಬೈಂದೂರು ರೋಟರಿ ಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಾಹಿತ್ಯಕ್ಕೆ ವರ್ಗಗಳ ಬೇದವಿಲ್ಲ.ಮತ,ಪಂಥಗಳ ಬೇಲಿಗಳಿಲ್ಲ.ಬದಲಾಗಿ ನಮ್ಮೊಳಗಿನ ಸಂವೇದನೆಗಳ ಅಭಿವ್ಯಕ್ತಿ ಮೂಲಕ ಸಮಾನ ಮನಸ್ಕರನ್ನು ಒಗ್ಗೂಡಿಸುವ ವೇದಿಕೆಯಾಗಿದೆ.ಗ್ರಾಮೀಣ ಭಾಗದ ಜನರು ನೆಲ,ಜಲ,ಸಂಸ್ಕ್ರತಿ,ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ.ಸಾಹಿತ್ಯ ಎಂದರೆ ಬರವಣಿಗೆ ತಿಳಿದವರ ಪರಿಗಣನೆ ಮಾತ್ರವಲ್ಲ ಬದಲಾಗಿ ನಾಡು,ನುಡಿ,ನೆಲ,ಜಲ,ಸಂಸ್ಕ್ರತಿಯ ಸೇವೆ ಕೂಡ ಪರಿಗಣನೆಯಾಗುತ್ತದೆ.ಬೈಂದೂರು ಘಟಕದ ಮೂಲಕ ಯುವ ಬರಹಗಾರರಿಗೆ ವೇದಿಕೆ,ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಾಹಿತ್ಯ ಆಸಕ್ತಿ, ಹಿರಿಯರೆಡೆಗೆ ಸಾಹಿತ್ಯ,ದತ್ತಿ ವಿಮಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಬೈಂದೂರು ಘಟಕ ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಕ.ಸಾ.ಪ ಬೈಂದೂರು ಘಟಕದ ಅಧ್ಯಕ್ಷ ಅರುಣ್ ಕುಮಾರ್ ಶಿರೂರು,ಕಾರ್ಯದರ್ಶಿ ಮಂಜುನಾಥ ದೇವಾಡಿಗ,ಸಂಘಟನಾ ಕಾರ್ಯದರ್ಶಿ ಸುಧಾಕರ ಪಿ.ದೇವಾಡಿಗ,ಖಜಾಂಚಿ ಚಂದ್ರಶೇಖರ ನಾವಡ ಮುಂತಾದವರು ಉಪಸ್ಥಿತರಿದ್ದರು.
ಬೈಂದೂರು ತಾಲೂಕಿನ ಸಾಹಿತ್ಯಾಸಕ್ತ ಶಿಕ್ಷಕರು,ಸಾಹಿತ್ಯ ಅಭಿಮಾನಿಗಳು ಭಾಗವಹಿಸಿದ್ದರು.ನಿತ್ಯಾನಂದ ಪಂಡಿತ್ ಶಿರೂರು ಹಾಗೂ ಪುಂಡಲೀಕ ನಾಯಕ್ ಕವನ ವಾಚಿಸಿದರು.
ಉಡುಪಿ ಜಿಲ್ಲಾ ಕ.ಸಾ.ಪ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ್ಯದರ್ಶಿ ಮಂಜುನಾಥ ವಂದಿಸಿದರು.