ಶಿರೂರು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ನೂತನ ಮೂರು ತರಗತಿ ಕೋಣೆಗಳ ಉದ್ಘಾಟನೆ ಹಾಗೂ ಶಾಲಾ ಬಸ್ ಪ್ರಾಜೆಕ್ಟ್‌ಗೆ ಸಹಕರಿಸಿದ ದಾನಿಗಳ ಹೆಸರಿನ ಅಮೃತಫಲಕ ಅನಾವರಣ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು.
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೂತನ ತರಗತಿ ಕೋಣೆಗಳನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಒಂದು ಕೋಟಿ ಇಪ್ಪತ್ತೈದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸರಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ.ಕನ್ನಡ ಶಾಲೆಯ ಉಳಿವು ಹಾಗೂ ಬೆಳವಣಿಗೆಯ ಆತಂಕದ ಜೊತೆಗೆ ಸರಕಾರ ಕೂಡ ಹತ್ತು ಹಲವು ಯೋಜನೆಗಳ ಮೂಲಕ ಸರಕಾರಿ ಶಾಲೆಯ ಬೆಳವಣಿಗೆಗೆ ಪ್ರೋತ್ಸಾಹಿಸುತ್ತಿದೆ.ಕಾಲಘಟ್ಟ ಬದಲಾದಂತೆ ಸರಕಾರಿ ಶಾಲೆಯಲ್ಲಿ ಓದಿ ಅತ್ಯುನ್ನತ ಸಾಧನೆ ಮಾಡಿದ ನೂರಾರು ಉದಾಹರಣೆಗಳಿವೆ.ಶಾಲೆಗಳ ಬೆಳವಣಿಗೆಗೆ ಶಿಕ್ಷಣಾಭಿಮಾನಿಗಳ ಕೊಡುಗೆ ಅತ್ಯಗತ್ಯ.ಶಾಲೆಯ ಹಳೆ ವಿದ್ಯಾರ್ಥಿಯಾಗಿ ಕಲಿತ ಸಂಸ್ಥೆಗೆ ಕಟ್ಟಡ ನಿರ್ಮಿಸಿಕೊಟ್ಟ ಶಿರೂರು ಮಾದರಿ ಶಾಲೆ ಬೆಳವಣಿಗೆ ಇತರ ಶಾಲೆಗಳಿಗೆ ಮಾದರಿ ಎಂದರು.
ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಊರಿನ ಅಭಿಮಾನ ಇದ್ದಾಗ ಶಾಲೆಗಳ ಉನ್ನತಿಕರಣ ಸಾಧ್ಯ.ವಿದ್ಯಾಭ್ಯಾಸ ಪಡೆದು ಬದುಕು ರೂಪಿಸಿಕೊಂಡ ಬಳಿಕ ತಾನು ಕಲಿತ ಶಾಲೆ ಹಾಗೂ ಬೆಳೆದ ಊರಿನ ಅಭಿಮಾನ ಇದ್ದಾಗ ಪ್ರಗತಿ ಸಾಧ್ಯ.ಇಂತಹ ಶಿಕ್ಷಣಾಭಿಮಾನ ಮೆರೆದ ಸಯ್ಯದ್ ಅಬುಬಕರ್ ಸಮಾಜಕ್ಕೆ ಆದರ್ಶಪ್ರಾಯರು ಎಂದರು.
ಮುಖ್ಯ ಅತಿಥಿಗಳಾಗಿ ಶಿರೂರು ಗ್ರಾ.ಪಂ ಅಧ್ಯಕ್ಷೆ ಜಿ.ಯು ದಿಲ್‌ಶಾದ್ ಬೇಗಂ,ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಪಟೇಲ್,ಗ್ರಾ.ಪಂ ಸದಸ್ಯರಾದ ನಾಗಯ್ಯ ಶೆಟ್ಟಿ,ಪ್ರೇಮಾ,ಉಷಾ, ಉದಯ ಪೂಜಾರಿ,ಸುರೇಂದ್ರ ದೇವಾಡಿಗ,ನಾಗರತ್ನ ಆಚಾರಿ,ಪ್ರಸನ್ನ ಕುಮಾರ್ ಶೆಟ್ಟಿ,ಪ್ರಭಾವತಿ,ಪದ್ಮಾವತಿ,ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ,ತಾ.ಪಂ ಮಾಜಿ ಸದಸ್ಯರಾದ ಪುಷ್ಪರಾಜ್ ಶೆಟ್ಟಿ,ಮೌಲಾನ ದಸ್ತಗೀರ್,ಎಸ್.ಎಮ್.ಸೈಯದ್,ಇಂಜಿನಿಯರ್ ಎಸ್.ಎಮ್.ಜಾಫರ್,ಅಜ್ಮಲ್ ಸಾಹೇಬ್,ಶಾಲಾ ಎಸ್.ಡಿ.ಸಿ ಅಧ್ಯಕ್ಷ ಸತೀಶ ಶೆಟ್ಟಿ,ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ಎಸ್.ಡಿ.ಎಮ್.ಸಿ ಅಧ್ಯಕ್ಷ ರಘುವೀರ ಶೇಟ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಕಟ್ಟಡದ ದಾನಿಗಳಾದ ಸೈಯದ್ ಅಬುಬಕರ್ ರವರನ್ನು ಸಮ್ಮಾನಿಸಲಾಯಿತು ಹಾಗೂ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತ ಮಾಧವ ಬಿಲ್ಲವ,ಎಸ್.ಡಿ.ಎಮ್.ಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ಮೇಸ್ತ ಹಾಗೂ ಕಟ್ಟಡ ನಿರ್ಮಿಸಿದ ಇಮ್ತಿಯಾಜ್ ರವರನ್ನು ಗೌರವಿಸಲಾಯಿತು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಾಲಾ ಮುಖ್ಯ ಶಿಕ್ಷಕ ಶಂಕರ ಶಿರೂರು ಸ್ವಾಗತಿಸಿದರು.ಸಿ.ಎನ್.ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ಸೋಮರಾಯ ಜನ್ನು ವಂದಿಸಿದರು.
ವರದಿ/ಗಿರೀಶ್ ಶಿರೂರು
ಚಿತ್ರ: ಎ.ವನ್.ಸ್ಟುಡಿಯೋ ಶಿರೂರು