ಬೈಂದೂರು; ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ,ಬೈಂದೂರು -ಶಿರೂರು ಘಟಕ,ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ,ಪ್ರಸಾದ ನೇತ್ರಾಲಯ ಉಡುಪಿ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇದರ ಸಹಯೋಗದಲ್ಲಿ ನಾಡೋಜ ಡಾ.ಜಿ.ಶಂಕರ್ ರವರ 67ನೇ ಹುಟ್ಟುಹಬ್ಬದ ಪ್ರಯುಕ್ತ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡ ವಿತರಣೆ ಕಾರ್ಯಕ್ರಮ ಅಂಬೇಡ್ಕರ್ ಭವನ ಬೈಂದೂರಿನಲ್ಲಿ ನಡೆಯಿತು..
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಶಿಕ್ಷಣ ಮತ್ತು ಆರೋಗ್ಯದ ಪಾತ್ರ ಬಹಳ ಮುಖ್ಯವಾಗಿರುತ್ತದೆ.ಗ್ರಾಮೀಣ ಭಾಗದ ನೂರಾರು ಕುಟುಂಬಗಳಿಗೆ ಆರೋಗ್ಯದ ವಿಚಾರದಲ್ಲಿ ಸಮರ್ಪಕ ಮಾಹಿತಿ ಇಲ್ಲದೆ ಆಸ್ಪತ್ರೆಗೆ ಅಲೆಯುತ್ತಿರುವುದು ಸಮಾನ್ಯವಾಗಿದೆ.ಹೀಗಾಗಿ ಇಂತಹ ಆರೋಗ್ಯ ಶಿಬಿರದ ಮೂಲಕ ಜನಸಾಮಾನ್ಯರಿಗೆ ಅನುಕೂಲ ನೀಡುವುದು ಅತ್ಯುತ್ತಮ ಕಾರ್ಯವಾಗಿದೆ.ಮೊಗವೀರ ಯುವ ಸಂಘಟನೆ ಹತ್ತಾರು ಸಮಾಜಮುಖಿ ಕಾರ್ಯದ ಮೂಲಕ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಮೊಗವೀರ ಯುವ ಸಂಘಟನೆ ಬೈಂದೂರು ಶಿರೂರು ಘಟಕದ ಅಧ್ಯಕ್ಷ ರವಿರಾಜ್ ಚಂದನ್ ಕಳವಾಡಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯ ಮದನ್ ಕುಮಾರ್ ಉಪ್ಪುಂದ,ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮಿತಿ ಸದಸ್ಯೆ ರತ್ನ ರಮೇಶ್ ವಿ.ಕುಂದರ್,ಮತ್ಸೋಧ್ಯಮಿ ತಿಮ್ಮಪ್ಪ ಮೊಗವೀರ,ಬೈಂದೂರು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಗುರುಪ್ರಸಾದ ಶೆಟ್ಟಿ ಯಡೇರಿ,ಪ್ರಸಾದ ನೇತ್ರಾಲಯ ಉಡುಪಿ ನೇತ್ರ ತಜ್ಞೆ ಡಾ.ಅರ್ಚನಾ ಶೆಟ್ಟಿ,ಮೊಗವೀರ ಯುವ ಸಂಘಟನೆಯ ಗೌರವ ಸಲಹೆಗಾರರಾದ ರಾಮ ಎನ್. ಮೊಗವೀರ ಅಳ್ವೆಗದ್ದೆ,ಜಿಲ್ಲಾ ಸಮಿತಿ ಸದಸ್ಯ ರಮೇಶ್ ಕೋಟ,ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘದ ಉಪಾಧ್ಯಕ್ಷ ರಾಜು ಶ್ರೀಯಾನ್,ಕಾರ್ಯದರ್ಶಿ ಪ್ರಭಾಕರ ಸೇನಾಪುರ,ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಮಾಜಿ ಅಧ್ಯಕ್ಷ ನಾಗರಾಜ್ ಚಂದನ್ ತಗ್ಗರ್ಸೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ,ಮದನ್ ಕುಮಾರ್ ಉಪ್ಪುಂದ ಹಾಗೂ ರತ್ನ ರಮೇಶ್ ರವರನ್ನು ಮೊಗವೀರ ಸಂಘಟನೆ ವತಿಯಿಂದ ಗೌರವಿಸಲಾಯಿತು.
ಮೊಗವೀರ ಯುವ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಕೃಷ್ಣ ಮೊಗವೀರ ಸ್ವಾಗತಿಸಿದರು.ವಿಕ್ರಮ್ ತಗ್ಗರ್ಸೆ ಕಾರ್ಯಕ್ರಮ ನಿರ್ವಹಿಸಿದರು.ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಂಗಾಧರ ಪಡುವರಿ ವಂದಿಸಿದರು.
News/pic: Girish shiruru