ಶಿರೂರು: ಕೆನರಾ ಬ್ಯಾಂಕ್ ಶಿರೂರು ಶಾಖೆಯಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಹಾಯಕ ವ್ಯವಸ್ಥಾಪಕರಾದ ಮನೋಜ್ ಕುಮಾರ್ ಹಾಗೂ ಕವಿತಾ ಇವರ ಬೀಳ್ಕೋಡುಗೆ ಸಮಾರಂಭ ಶಿರೂರು ಕೆನರಾ ಬ್ಯಾಂಕ್ ಶಾಖಾ ಕಛೇರಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಹಕರು ಹಾಗೂ ಬ್ಯಾಂಕ್ ಸಿಬಂದಿಗಳ ಪರವಾಗಿ ಸಮ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಖಾ ಪ್ರಬಂಧಕ ಯೋಗೀಶ್ ಜಿ.ಜಿ,ಸಿಬಂದಿಗಳಾದ ರಾಜೇಂದ್ರ, ಸುನೀಲ್,ಉದ್ಯ ಪ್ರಸಾದ ಪ್ರಭು, ಮತ್ಸೋಧ್ಯಮಿ ತಿಮ್ಮಪ್ಪ ಮೊಗೇರ್ ಅಳ್ವೆಗದ್ದೆ,ಹರೀಶ್ ಶೇಟ್,ಲಕ್ಷ್ಮೀಶ್ ನಾಯ್ಕ ಗೋರ್ಟೆ,ರಾಮ ಮೊಗೇರ್ ಅಳ್ವೆಗದ್ದೆ ಹಾಗೂ ಗ್ರಾಹಕರು ಹಾಜರಿದ್ದರು.