ಉಪ್ಪುಂದ; 2024 – 2025ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉಪ್ಪುಂದ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವರಪ್ರಸಾದ್ ಎಂ ಬಿಜೂರು 625 ಕ್ಕೆ 619 ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಏಳನೇ ರ‍್ಯಾಂಕ್ ಪಡೆದು ತನ್ನೂರಿಗೆ ಹಾಗೂ ತಾನು ಕಲಿತ ಸರಕಾರಿ ಶಾಲೆಗೆ ಹೆಮ್ಮೆ ತಂದಿರುತ್ತಾನೆ.ಈ ಅಭೂತಪೂರ್ವ ಸಾಧನೆಯನ್ನು ಗುರುತಿಸಿ ಉಪ್ಪುಂದ ಕಲ್ಯಾಣಿ ಪರಮೇಶ್ವರ ಭಟ್ ಟ್ರಸ್ಟ್ ಬೆಂಗಳೂರು ಇವರ ಆಶ್ರಯದಲ್ಲಿ ಆದಿತ್ಯವಾರ ವಿದ್ಯಾರ್ಥಿಯ ಸ್ವಗೃಹದಲ್ಲಿ ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ದೀಟಿ ಸೀತಾರಾಮ ಮಯ್ಯ,ನಿವೃತ್ತ ಶಿಕ್ಷಕರಾದ ರಾಜಾರಾಮ್ ಭಟ್, ಆನಂದ ಗಾಣಿಗ,ವೆಂಕಟರಮಣ ಶೇರುಗಾರ್,ಮಂಜು ದೇವಾಡಿಗ ಅರೆಹಾಡಿ,ಗಣೇಶ್ ಉಪ್ಪುಂದ,ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ,ಅನಿಲ್ ಡಿ ಉಪ್ಪುಂದ,ಶಿಕ್ಷಕರಾದ ಮಂಜುನಾಥ್ ಶೇರುಗಾರ್, ಭಾರತಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಯು ಸಂದೇಶ್ ಭಟ್ ಕಾರ್ಯಕ್ರಮ ನಿರೂಪಿಸಿ ಅತಿಥಿಗಳನ್ನು ಸ್ವಾಗತಿಸಿದರು. ಪುರುಷೋತ್ತಮದಾಸ್ ಉಪ್ಪುಂದ ವಂದಿಸಿದರು