ಶಿರೂರು: ಶಿರೂರು ಮೇಲ್ಪಂಕ್ತಿ ಐತಿಹಾಸಿಕ ಪ್ರಸಿದ್ದ ಶ್ರೀ ಎರಗೇಶ್ವರ ದೇವಸ್ಥಾನದ ಶ್ರೀ ಗಣಪತಿ ದೇವರು, ಶ್ರೀ ದುರ್ಗಾಪರಮೇಶ್ವರಿ ಹಾಗೂ ಧ್ವಜೇಶ್ವರನ ಪ್ರತಿಷ್ಠೆಯೊಂದಿಗೆ ಶಿಲಾಮಯ ರಾಜಗೋಪುರ, ಹೆಬ್ಬಾಗಿಲು ಮತ್ತು ಉತ್ತರ ಪೌಳಿಯ ಲೋಕಾರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಧಾರ್ಮಿಕ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕರಾವಳಿ ಭಾಗ ಅತ್ಯಂತ ಶ್ರೇಷ್ಟ ಮತ್ತು ಪವಿತ್ರ ಕಾರ್ಣಿಕ ಸ್ಥಳಗಳನ್ನು ಹೊಂದಿದೆ.ಪ್ರಸಿದ್ದ ದೇವಾಲಯಗಳು ಕೂಡ ಅದರದ್ದೆ ಆಗಿರುವ ಹಿನ್ನೆಲೆಯನ್ನು ಹೊಂದಿದೆ.ಭಗವಂತನ ಸಾಕ್ಷಾತ್ಕಾರವಿದ್ದಾಗ ಮಾತ್ರ ದೇಗುಲ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ ದೇವಸ್ಥಾನದ ಅಭಿವೃದ್ದಿ ಊರಿಗೆ ಶ್ರೇಯಸ್ಸು ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಿರೂರು ಗ್ರಾಮ ಅತ್ಯಂತ ವಿಶೇಷವಾಗಿ ಗುರುತಿಸಿಕೊಂಡಿದೆ.ಇಲ್ಲಿನ ಒಗ್ಗಟ್ಟು, ಸಾಂಘಿಕ ಪರಿಶ್ರಮ,ಶಾಲೆ,ದೇವಸ್ಥಾನದ ಪ್ರಗತಿ ಇವೆಲ್ಲವೂ ಇತರರಿಗೆ ಮಾದರಿಯಾಗಿದೆ.ನೂತನ ಪೌಳಿ ನಿರ್ಮಾಣ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.ದೇವಸ್ಥಾನದ ಅಭಿವೃದ್ದಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಬದುಕಿನ ಸಾರ್ಥಕತೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಹೊಸ್ಮನೆ,ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೋಣೆಮನೆ ನಾಗಪ್ಪಯ್ಯ ಆಚಾರ್, ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ,ಭಟ್ಕಳ ಕಾಳಿಕಾಂಬಾ ದೇವಸ್ಥಾನದ 1ನೇ ಆಡಳಿತ ಮೊಕ್ತೇಸರ ಗಜಾನನ ಆಚಾರ್ಯ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಬಾಲಕೃಷ್ಣ ಎನ್.ಆಚಾರ್ಯ ಮಠದಮನೆ,ನಾಗಪ್ಪ ವಿ.ಗಾಣಿಗ ನಾಕಟ್ಟೆ,ಡಾ.ಯು.ಮಾಧವ ಶೆಟ್ಟಿ, ಶಿರೂರು ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ ಮೈದಿನಪುರ,ಪ್ರಸನ್ನ ಕುಮಾರ್ ಶೆಟ್ಟಿ,,ನಿವೃತ್ತ ಶಿಕ್ಷಕ ರಾಮಕೃಷ್ಣ ಡಿ, ಮಂಜುನಾಥ ಆಚಾರ್ಯ,ನರಸಿಂಹ ಆಚಾರ್ಯ,ಶ್ರೀಧರ ಆಚಾರ್ಯ,ರತ್ನಾಕರ ಆಚಾರ್ಯ,ತಿಮ್ಮಪ್ಪಯ್ಯ ಆಚಾರ್ಯ,ಉದ್ಯಮಿ ಜಯಂತ ಪೂಜಾರಿ ಮೇಲ್ಪಂಕ್ತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಂಜೀವ ಶೆಟ್ಟಿ ಭದ್ರಶೆಟ್ರಮನೆ, ಶಿಲ್ಪಿಗಳಾದ ವಿಶ್ವನಾಥ ಕಾಬೆಟ್ಟು ಕಾರ್ಕಳ ಹಾಗೂ ದೇವಸ್ಥಾನಕ್ಕೆ ಧನ ಸಹಾಯ ನೀಡಿದ ದಾನಿಗಳನ್ನು ಸಮ್ಮಾನಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಶಾಂತಾನಂದ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕೋಶಾಧಿಕಾರಿ ಸುಜಾತ ಎಸ್.ಆಚಾರ್ಯ ಸ್ವಾಗತಿಸಿದರು.ಶಿಕ್ಷಕರಾದ ಸಿ.ಎನ್.ಬಿಲ್ಲವ ಹಾಗೂ ಪ್ರಭಾಕರ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಎಚ್. ಚಂದ್ರಶೇಖರ ಶೆಟ್ಟಿ ರಜತಾದ್ರಿ ವಂದಿಸಿದರು.
ವರದಿ/ ಗಿರಿ ಶಿರೂರು
ಚಿತ್ರ; ಜೀವ ಸ್ಟುಡಿಯೋ ಮುರ್ಡೇಶ್ವರ