ಶಿರೂರು: ಅತ್ಯಂತ ಪ್ರತಿಷ್ಠಿತ ದೇಶ ನಮ್ಮ ಭಾರತ ಎನ್ನುವುದು ನಮ್ಮೆಲ್ಲರ ಹೆಮ್ಮೆ.ಈ ದೇಶ ಮೂರು ಭಾಗದಲ್ಲೂ ಜಲಾವೃತಗೊಂಡಿದೆ.ಒಂದು ಭಾಗದಲ್ಲಿ ಭೂಮಿ ಹೊಂದಿದ್ದು ಸಾಗರದ ಮೂಲಕ ನುಸುಳುವವರನ್ನು ಬೇದಿಸುವುದು ದೊಡ್ಡ ಸವಾಲಾಗಿದೆ ಮತ್ತು ಕಡಲ ಮಾರ್ಗದ ಭದ್ರತೆಗೆ ವಿಶೇಷ ಒತ್ತು ನೀಡಬೇಕಾಗಿದೆ ಹೀಗಾಗಿ ಕರಾವಳಿ ಕಡಲ ತಡಿಯ ಪ್ರತಿ ನಾಗರೀಕರಿಗೂ ದೇಶ ಸಂರಕ್ಷಣೆಯ ಮಹತ್ವದ ಜವಬ್ದಾರಿ ಇದೆ.ಎಂದು ಸಿಐಎಸ್‌ಎಫ್ ಡೆಪ್ಯೂಟಿ ಕಮಾಂಡರ್ ರಾಜೇಂದ್ರ ಪ್ರಸಾದ್ ಪಾಠಕ್ ಹೇಳಿದರು ಅವರು ಶಿರೂರು ಸಮೀಪದ ಎಮ್.ಎಮ್.ರೇಸಾರ್ಟ್ ನಲ್ಲಿ ಸಿ.ಐ.ಎಸ್.ಎಫ್ ಸೈಕಲ್ ಜಾಥಾ ಸ್ವಾಗತಿಸಿ ಮಾತನಾಡಿ ಸಿ.ಐ.ಎಸ್.ಎಫ್ ದೇಶದ ಭದ್ರತೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ.ಯುವಜನರು ಮಾದಕ ವ್ಯಸನದಿಂದ ಅರಿವು ಮೂಡಿಸುವುದು ಮತ್ತು ಮಹಿಳಾ ಜಾಗೃತಿ ಹಾಗೂ ಕರಾವಳಿ ಭಾಗದ ಜನರಿಗೆ ದೇಶ ರಕ್ಷಣೆಯ ಜನಜಾಗೃತಿ ಈ ಜಾಥಾದ ಉದ್ದೇಶವಾಗಿದೆ ಎಂದರು.
ದಿ.ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ನಿರ್ದೇಶಕಿ ಬೀನಾ ವೈದ್ಯ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ದೇಶ ರಕ್ಷಣೆಯಲ್ಲಿ ಸೈನ್ಯದ ಪಾತ್ರ ಅಪಾರ.ನಮ್ಮ ದೇಶ,ನೆಲ,ಜಲ,ಭಾಷೆಯ ಗೌರವ ಮೊದಲ ಆದ್ಯತೆ. ಸಿ.ಐ.ಎಸ್.ಎಫ್ ಇಂತಹ ಜನಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಕರಾವಳಿ ಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ ಮತ್ತು ಜನಜಾಗೃತಿ ಮೂಡಿದೆ ಎಂದರು.
ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಕಮಾಂಡರ್ ದುರ್ಗೆಶ್ ಕಲಾಲ್,ಡೆಪ್ಯೂಟಿ ಕಮಾಂಡೆಂಟ್ ವಿಭು ಸಿಂಗ್ ಪ್ರತಿಹಾರ್,ಗ್ರೂಪ್ ಕಮಾಂಡೆಂಟ್ ಅನೂಫ್ ಸಿನ್ಹಾ, ಬೆಳಕೆ ಗ್ರಾ.ಪಂ ಅಧ್ಯಕ್ಷ ಜಗದೀಶ ನಾಯ್ಕ,ಮುಖಂಡರಾದ ವೆಂಕಟೇಶ ನಾಯ್ಕ,ಗೋಪಾಲ ಮೊಗೇರ್ ಭಟ್ಕಳ,ರಾಜೇಶ ನಾಯ್ಕ ಮುಂಡಳ್ಳಿ,ಸುರೇಶ್ ನಾಯ್ಕ,ಭಾಸ್ಕರ ಖಾರ್ವಿ,ಎಮ್.ಎಮ್.ರೇಸಾರ್ಟ್ ನ ಮಣೆಗಾರ್ ಜಾಫರ್ ಮುಂತಾದವರು ಉಪಸ್ಥಿತರಿದ್ದರು.

ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
News/Giri Shiruru
Photo: Pavan Mestha Shiruru