ಶಿರೂರು: ಯುವಕರು ಸಂಘಟಿತರಾದಾಗ ಸಾಂಘಿಕ ಪ್ರಯತ್ನದ ಮೂಲಕ ಕ್ರಿಯಾಶೀಲ ಯೋಜನೆಗಳು ಸಾಕಾರಗೊಳ್ಳುತ್ತದೆ.ಧಾರ್ಮಿಕ ಚಟುವಟಿಕೆಗಳು ನಮಗೆ ಶ್ರೇಯೊಭಿವೃದ್ದಿ ನೀಡುತ್ತದೆ ಹಾಗೂ ಉತ್ತಮ ಕಾರ್ಯಗಳು ಸದಾ ಜನಮಾನಸದಲ್ಲಿ ಉಳಿಯುತ್ತದೆ .ಸಾಮಾಜಿಕ ಕಾಳಜಿ ಹಾಗೂ ಸೇವಾ ಮನೋಭಾವನೆಯಿದ್ದಾಗ ಮಾತ್ರ ಊರಿನ ಅಭಿವ್ರದ್ದಿ ಸಾಧ್ಯ.ಉತ್ಸವಗಳು ಊರಿನ ಕ್ರಿಯಾಶೀಲತೆಯನ್ನು ಬಿಂಬಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಶಿರೂರು ಜೆಸಿಐ ಅಧ್ಯಕ್ಷ ಸುರೇಶ್ ಮಾಕೋಡಿ,ಆದರ್ಶ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರವಿ ಗಾಣಿಗ,ಅನ್ನದಾನದ ಸೇವಾಕರ್ತರಾದ ಗೀತಾ ನಾಗು ಪೂಜಾರಿ,ಧ.ಗ್ರಾ.ಯೋಜನೆ ಆಲಂದೂರು ಒಕ್ಕೂಟದ ಅಧ್ಯಕ್ಷೆ ಜ್ಯೋತಿ ಮೇಸ್ತ,ಮಾಜಿ ಗ್ರಾ.ಪಂ ಸದಸ್ಯ ಉದಯ ಮಾಕೋಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತ ಹಾಗೂ ಆಲಂದೂರು ಶಾಲೆಯ ಮುಖ್ಯ ಶಿಕ್ಷಕ ಮಾಧವ ಬಿಲ್ಲವ ರವರನ್ನು ಸಮ್ಮಾನಿಸಲಾಯಿತು.
ಆಲಂದೂರು ಮಂಜುನಾಥ ಗಾಣಿಗ ಸ್ವಾಗತಿಸಿದರು.ಶಿಕ್ಷಕ ಶ್ರೀಕಾಂತ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕ ಪ್ರಕಾಶ ಮಾಕೋಡಿ ವಂದಿಸಿದರು.
News/Girish shiruru
photo/krishna smart studio