ಬೈಂದೂರು; ಕಂದಾಯ ಇಲಾಖೆ ಬೈಂದೂರು,ಜಿಲ್ಲಾ ಮಟ್ಟದ ಕಂದಾಯ ಇಲಾಖೆ ನೌಕರರ ರೆವಿನ್ಯೂ ಕಫ್ -2025 ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು.
ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಮಾತನಾಡಿ ಕಂದಾಯ ಇಲಾಖೆ ಸಿಬ್ಬಂದಿ ತಮ್ಮ ಕರ್ತವ್ಯದ ಜೊತೆಗೆ ಸಾಮಾಜಿಕ ಜವಬ್ದಾರಿ ಅತ್ಯಗತ್ಯ.ಕ್ರೀಡೆಯ ಮೂಲಕ ಪರಸ್ಪರ ಭಾಂಧವ್ಯ ವ್ರದ್ದಿಯ ಜೊತೆಗೆ ಸಂಘಟನಾತ್ಮಕ ಚಿಂತನೆ ಮೂಡುತ್ತದೆ.ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಮುಖ್ಯ. ಸೋಲು-ಗೆಲುವು ಸಾಮಾನ್ಯ. ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ನೌಕರರು ಸಕ್ರಿಯವಾಗಿ ಭಾಗವಹಿಸುವುದರಿಂದ ಉತ್ಸಾಹ ಕಾಣಲು ಸಾಧ್ಯ. ಯಶಸ್ವಿಯಾಗಿ ಭಾಗವಹಿಸುವ ಮೂಲಕ ಕ್ರೀಡಾ ಮೆರಗು ಹೆಚ್ಚಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ್,ಭೂ ದಾಖಲೆಗಳ ಉಪನಿರೀಕ್ಷಕರು ರವೀಂದ್ರ ,ಕಾರ್ಕಳ ತಹಶೀಲ್ದಾರ ಪ್ರದೀಪ್ ಆರ್,ಬ್ರಹ್ಮಾವರ ತಹಶೀಲ್ದಾರ ಶ್ರೀಕಾಂತ್ ಎಸ್.ಹೆಗ್ಡೆ,ಹೆಬ್ರಿ ತಹಶೀಲ್ದಾರ ಎಸ್.ಎ ಪ್ರಸಾದ್,ಕುಂದಾಪುರ ತಹಶೀಲ್ದಾರ ಮಲ್ಲಿಕಾರ್ಜುನ,ಉಡುಪಿ ತಹಶೀಲ್ದಾರ ಗುರುರಾಜ್ ಪಿ.ಆರ್,ಕಂದಾಯ ನಿರೀಕ್ಷಕ ರವಿಶಂಕರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಬೈಂದೂರು ತಹಶೀಲ್ದಾರ ಭೀಮಸೇನ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಳಿಕ ವಿವಿಧ ಕಂದಾಯ ಇಲಾಖೆಯ ಸಿಬ್ಬಂದಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು.