ಬೈಂದೂರು: ನಾಟಕಗಳು ನಮ್ಮೊಳಗಿನ ವಿಷಯಗಳನ್ನು ಅರ್ಥಪೂರ್ಣವಾಗಿ ಸಮಕಾಲಿನ ಅಧ್ಯಯನದ ಮೂಲಕ ಜನರಿಗೆ ತಲುಪಿಸುವ ವೇದಿಕೆಯಾಗಿದೆ.ಸಮಾಜದ ನಡುವಿನ ವಿಚಾರಗಳನ್ನು ಕಾಲದ ಬದಲಾವಣೆ, ವ್ಯವಸ್ಥೆಯ ಬದಲಾವಣೆಗೆ ಪೂರಕವಾಗಿ ರೂಪಿಸಿಕೊಳ್ಳುವ ಮತ್ತು ಎಚ್ಚರಿಸುವ ಮಾಧ್ಯಮವಾಗಿದೆ.ಬೈಂದೂರಿನಂತಹ ಗ್ರಾಮೀಣ ಭಾಗದಲ್ಲಿ ಲಾವಣ್ಯ ಸಂಸ್ಥೆ ಕಲಾಭೂಮಿಯನ್ನು ಬೆಳೆಸಿದ ಹಿರಿಮೆ ಬೈಂದೂರಿನ ಹೆಮ್ಮೆಯಾಗಿದೆ ಎಂದು ತೆರಿಗೆ ಸಲಹೆಗಾರ ಜತೀಂದ್ರ ಮರವಂತೆ ಹೇಳಿದರು ಅವರು ಶನಿವಾರ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆದ ಲಾವಣ್ಯ (ರಿ.)ಬೈಂದೂರು ಹಾಗೂ ಮಾಜಿ ಶಾಸಕ ದಿ.ಕೆ.ಲಕ್ಷ್ಮೀನಾರಾಯಣ ಸ್ಮರಣಾರ್ಥ ಇದರ 48ನೇ ವರ್ಷದ ವಾರ್ಷಿಕೋತ್ಸವ,ರಂಗಪಂಚಮಿ -2025 ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಈ ಮಾತುಗಳನ್ನಾಡಿದರು.
ಲಾವಣ್ಯ ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ. ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಹವ್ಯಾಸಿ ರಂಗಭೂಮಿ ಕಲಾವಿದೆ ಚೇತನ್ ಪ್ರಸಾದ್ ಬೆಂಗಳೂರು,ಬೈಂದೂರು ತಾಲೂಕು ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷೆ ವಿದ್ಯಾ ಅಶೋಕ ಶೇಟ್,ಲಾವಣ್ಯದ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು.



ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಗೋವಿಂದ ಎಂ ಹಾಗೂ ಸಂಗೀತ ಕಲಾವಿದ ಕೃಷ್ಣ ಕಾಮತ್ ಹಾಲಾಡಿ ಯವರನ್ನು ಸಮ್ಮಾನಿಸಲಾಯಿತು.
ಮಾಜಿ ಅಧ್ಯಕ್ಷ ಗಣಪತಿ ಎಸ್.ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುಬ್ರಹ್ಮಣ್ಯ ಜಿ. ಕಾರ್ಯಕ್ರಮ ನಿರ್ವಹಿಸಿದರು.ಮಂಜುನಾಥ ಶಿರೂರು ವಂದಿಸಿದರು.
ವರದಿ/ಗಿರಿ ಶಿರೂರು