ಬೈಂದೂರು: ಲಾವಣ್ಯ (ರಿ.)ಬೈಂದೂರು ಹಾಗೂ ಮಾಜಿ ಶಾಸಕ ದಿ.ಕೆ.ಲಕ್ಷ್ಮೀನಾರಾಯಣ ಸ್ಮರಣಾರ್ಥ ಇದರ 48ನೇ ವರ್ಷದ ವಾರ್ಷಿಕೋತ್ಸವ,ರಂಗಪಂಚಮಿ -2025 ರಂಗೋತ್ಸವ ಕಾರ್ಯಕ್ರಮ ಮಾರ್ಚ್ 01 ರಿಂದ 05 ರ ವರೆಗೆ ಸಂಜೆ 6:30ಕ್ಕೆ ಬೈಂದೂರು ಶಾರದಾ ವೇದಿಕೆಯಲ್ಲಿ ನಡೆಯಲಿದೆ.
ಮಾ.01 ರಂದು ಸಂಜೆ ಬೈಂದೂರು ಲಾವಣ್ಯ ಸಂಸ್ಥೆಯ 48ನೇ ವರ್ಷದ ನಾಟಕೋತ್ಸವ ಸಮಾರಂಭವನ್ನು ಉದ್ಯಮಿ ಯು.ಬಿ ಶೆಟ್ಟಿ ಉದ್ಘಾಟಿಸಲಿದ್ದಾರೆ. ಬೈಂದೂರು ಲಾವಣ್ಯ ಸಂಸ್ಥೆಯ ಅಧ್ಯಕ್ಷ ನರಸಿಂಹ ಬಿ.ನಾಯಕ್ ಅಧ್ಯಕ್ಷತೆ ವಹಿಸಲಿದ್ದು ವಿವಿದ ಗಣ್ಯರು ಆಗಮಿಸಲಿದ್ದಾರೆ. ಲಾವಣ್ಯ (ರಿ.)ಬೈಂದೂರು ಇವರ ಬಿ.ಗಣೇಶ ಕಾರಂತ್ ನಿರ್ದೇಶನದ ಆಲಿಬಾಬಾ ಮತ್ತು ನಲವತ್ತು ಕಳ್ಳರು ಪ್ರದರ್ಶನಗೊಳ್ಳಲಿದೆ.
ಮಾ.02 ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ಲಾವಣ್ಯ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡದಿಂದ ಶ್ರೀಕೃಷ್ಣ ಲೀಲೆ ಹಾಗೂ ಕಂಸವಧೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಮಾ.03 ರಂದು ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು ಇವರಿಂದ ಮುದುಕನ ಮದುವೆ ನಾಟಕಪ್ರದರ್ಶನಗೊಳ್ಳಲಿದೆ.
ಮಾ.04 ರಂದು ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ನಟನ ಮೈಸೂರು ಇವರಿಂದ ಪ್ರಮೀಳಾರ್ಜುನೀಯಂ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.05 ರಂದು ರಂದು ಸಂಜೆ ಸಮಾರೋಪ ಸಮಾರಂಭ ಕಾರ್ಯಕ್ರಮದ ಖ.ರೈ.ಸೇ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್.ಪೈ ಅಧ್ಯಕ್ಷತೆ ವಹಿಸಲಿದ್ದಾರೆ.ರಂಗ ನಿರ್ದೇಶಕ ಡಾ.ಶ್ರೀಪಾದ್ ಭಟ್ ಉಡುಪಿ ಶುಭಶಂಸನೆಗೈಯಲಿದ್ದಾರೆ.ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ ಹಾಗೂ ಪ್ರತಿದಿನ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಗುವುದು.ಸಭಾ ಕಾರ್ಯಕ್ರಮದ ಬಳಿಕ ನಟನ ಮೈಸೂರು ಇವರಿಂದ ಉಷಾಹರಣ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಬೈಂದೂರು ಲಾವಣ್ಯ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.