ಬೈಂದೂರು: ಶ್ರೀ ಚಿಕ್ಕಮ್ಮ ಚೆನ್ನಮ್ಮ ಪ್ರೆಂಡ್ಸ್ ಹೊಸೂರು ಹಾಗೂ ಬೈಂದೂರು ತಾಲೂಕು ಅಮೇಚೂರ್ ಕಬಡ್ಡಿ ಅಸೋಶಿಯೇಷನ್ ಇವರ ಜಂಟಿ ಆಶ್ರಯದಲ್ಲಿ ತೃತೀಯ ವರ್ಷದ ಮರಾಠಿ ಬಾಂಧವರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಶ್ರೀ ಚಿಕ್ಕಮ್ಮ ಚೆನ್ನಮ್ಮ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಕಬಡ್ಡಿ ಪಂದ್ಯಾಟ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ಕ್ರೀಡೆಯಾದ ಕಬಡ್ಡಿ ಜಾಗತಿಕ ಮನ್ನಣೆಗಳಿಸಿಕೊಂಡಿದೆ.ಕಠಿಣ ಪರಿಶ್ರಮ ಮತ್ತು ಆಸಕ್ತಿ ಪ್ರತಿಯೊಬ್ಬರನ್ನು ಯಶಸ್ಸಿನತ್ತ ಕೊಂಡೊಯುತ್ತದೆ.ಕ್ರೀಡೆಯ ಮೂಲಕ ಸಂಘಟನೆ ಮತ್ತು ಸಾಮರಸ್ಯ ಮೂಡಿಸುವುದು.ಊರಿನ ಅಭಿವೃದ್ದಿಯ ಜೊತೆಗೆ ಉತ್ತಮ ಬೆಳವಣೆಗೆ ಎಂದರು.

ಬೈಂದೂರು ವಲಯ ಮರಾಠಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಭೋಜ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಉದ್ಯಮಿ ರಘುರಾಮ ಕೆ.ಪೂಜಾರಿ ಕ್ರೀಡಾಂಗಣವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಗ್ರಾ.ಪಂ ಸದಸ್ಯ ಉದಯ ಮಾಕೋಡಿ,ಭಟ್ಕಳ ಮರಾಠಿ ಸಂಘದ ಅಧ್ಯಕ್ಷ ರುಕ್ಮ ಮರಾಠಿ,ಮುಲ್ಲಿಬಾರು ಶಾಲೆಯ ಮುಖ್ಯ ಶಿಕ್ಷಕ ಮಹಾಬಲೇಶ್ವರ,ಗುರಿಕಾರ ಶೇಷ ಮರಾಠಿ,ಚಂದ್ರ ಎಸ್.ಮರಾಠಿ,ಓಮಿ ಮರಾಠಿ ಹೊಸೂರು,ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಮಾಸ್ತಯ್ಯ ಪೂಜಾರಿ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ದಯಾನಂದ ಮರಾಠಿ,ಚಿಕ್ಕಮ್ಮ ಚೆನ್ನಮ್ಮ ದೇವಸ್ಥಾನದ ಅಧ್ಯಕ್ಷ ನಾರಾಯಣ ಮರಾಠಿ,ಉದ್ಯಮಿ ಲಿಮೋನ್ ಅತ್ಯಾಡಿ,ಚಿಕ್ಕಮ್ಮ ಚೆನ್ನಮ್ಮ ದೇವಸ್ಥಾನದ ಕಾರ್ಯದರ್ಶಿ ರಾಜು ಮರಾಠಿ,ಕೊಲ್ಲೂರು ಶಾಲೆಯ ಶಿಕ್ಷಕ ಶಿವರಾಮ ಮರಾಠಿ,ಸಂಚಲನ ಸಂಸ್ಥೆಯ ಮಾಜಿ ಅಧ್ಯಕ್ಷ ತಿಮ್ಮ ಮರಾಠಿ, ಸಂಚಲನದ ಗೌರವಾಧ್ಯಕ್ಷ ಮಹಾದೇವ ಮರಾಠಿ,ಕೇಶವ ಪೂಜಾರಿ ನಾಗರಮಕ್ಕಿ,ನಾಗರಾಜ ಡಿ.ಮರಾಠಿ,ದೇವೇಂದ್ರ ಕೆ.ಮರಾಠಿ,ಬಾಬು ಮರಾಠಿ,ಕಾರ್ಯದರ್ಶಿ ದೇವೇಂದ್ರ ಮರಾಠಿ ಉಪಸ್ಥಿತರಿದ್ದರು.

ವಾಸುದೇವ ಮರಾಠಿ ಹೊಸೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ನಾಗಪ್ಪ ಮರಾಠಿ ಹೊಸೂರು ಸ್ವಾಗತಿಸಿದರು.ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರ್ವಹಿಸಿದರು.ರಾಜು ಮರಾಠಿ ವಂದಿಸಿದರು.

ಕಬಡ್ಡಿ ಪಂದ್ಯಾಟದಲ್ಲಿ  ಸನ್ಸ್ ಆಫ್ ಗುಡಿಸಿದ್ದ ಕಾಸಗೇರಿ ಪ್ರಥಮ ಹಾಗೂ ಯು.ಎನ್.ಬಿ ಬಂಗಣಿ ಸೌತ್‌ಕೇರಿ ದ್ವಿತೀಯ ಸ್ಥಾನ ಪಡೆದರು.

Leave a Reply

Your email address will not be published. Required fields are marked *

five + 4 =