ಮರವಂತೆ: ಬೈಂದೂರು ತಾಲೂಕಿನ ಮರವಂತೆ-ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಇದರ ಐದು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಜಗದೀಶ ಪಿ.ಪೂಜಾರಿ ಹಕ್ಕಾಡಿ ಹಾಗೂ ಉಪಾಧ್ಯಕ್ಷರಾಗಿ ಸತೀಶ ಕುಮಾರ್ ಶೆಟ್ಟಿ ಆಯ್ಕೆಯಾದರು.
ನೂತನ ನಿರ್ದೇಶಕರಾಗಿ ನರಸಿಂಹ ದೇವಾಡಿಗ, ಶ್ರೀನಿವಾಸ ಪೂಜಾರಿ, ಗಣೇಶ ಪೂಜಾರಿ, ಪ್ರಭಾಕರ ಎಂ. ಖಾರ್ವಿ, ಹರಿಶ್ಚಂದ್ರ ಆಚಾರ್ಯ, ಲಕ್ಷ್ಮೀ, ಶಕುಂತಲಾ, ಗಣೇಶ ಪೂಜಾರಿ, ವೀರೇಂದ್ರ ಹೆಗ್ಡೆ, ರಾಮ ಕಂತಿಹೊಂಡ, ಸುರೇಶ ನಾಯ್ಕ ಆಯ್ಕೆಯಾದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಸುನೀಲ್ ಕುಮಾರ್,ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಅಳ್ವೆಗದ್ದೆ ಹಾಜರಿದ್ದರು.









