ಶಿರೂರು: ದಿ.ಭಟ್ಕಳ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಇದರ ಆಡಳಿತ ಮಂಡಳಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ತುಳಸಿದಾಸ್ ಮೊಗೇರ್ ಶಿರೂರು ಇವರನ್ನು ಶಿರೂರು ವಲಯ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಅಳ್ವೆಗದ್ದೆ ಶಿರೂರು ಇದರ ವತಿಯಿಂದ ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ನಾರಾಯಣ ಮಾಸ್ತಿ ಅಕ್ಷಯ ಶ್ರೀನಿವಾಸ. ಉಪಾಧ್ಯಕ್ಷ ಬಾಬು ಮೊಗವೀರ,ನಿದೇರ್ಶಕರಾದ ಶ್ರೀ ದಿನೇಶ ಕುಮಾರ,ದತ್ತಾತ್ರೇಯ ಮೊಗವೀರ,ವೆಂಕಟೇಶ ಮೊಗವೀರ,ನಾರಾಯಣ ಮೊಗವೀರ,ಮೋಹನ ಮೊಗವೀರ,ಸಂಜೀವ ಮೊಗವೀರ,ದೀಪಾ ಮೊಗವೀರ,ಅಶ್ವಿನಿ ಮೊಗವೀರ,ಸಿಬ್ಬಂದಿಗಳಾದ ಶಿವಾನಂದ ಮೊಗೇರ,ಚೇತನ ಮೊಗೇರ ಉಪಸ್ಥಿತರಿದ್ದರು.