ಬೈಂದೂರು: ಪ್ರತಿಷ್ಠಿತ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ.ಯಡ್ತರೆ ಇದರ ಮುಂದಿನ 5 ವರ್ಷಗಳ ಅವಽಗೆ ನೂತನ ಅಧ್ಯಕ್ಷರಾಗಿ ಟಿ.ನಾರಾಯಣ ಹೆಗ್ಡೆ ತಗ್ಗರ್ಸೆ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಟಿ.ನಾರಾಯಣ ಹೆಗ್ಡೆ ತಗ್ಗರ್ಸೆ ನೇತ್ರತ್ವದ ಬಣ 13ಕ್ಕೆ 13 ಸ್ಥಾನಗಳನ್ನು ಗಳಿಸಿದೆ.ನಿರ್ದೇಶಕರಾಗಿ ಸದಾಶಿವ ಡಿ.ಪಡುವರಿ,ಚಿಕ್ಕು ಪೂಜಾರಿ,ವಸಂತ ಕುಮಾರ್ ಶೆಟ್ಟಿ ಕಾರಿಕಟ್ಟೆ,ವೆಂಕ್ಟ ಪೂಜಾರಿ,ಚಿಕ್ಕು ಪೂಜಾರಿ,ನಾಗರಾಜ ಶೆಟ್ಟಿ ನಾಕಟ್ಟೆ,ಅರುಣ್ ಕುಮಾರ್ ಶಿರೂರು,ಎಮ್.ಎಚ್ ಗುರುದತ್ತ ಶೇರುಗಾರ್,ಹೆರಿಯ ದೇವಾಡಿಗ,ಜ್ಯೋತಿ ಪೂಜಾರಿ,ಎಚ್.ವಿಜಯ ಶೇರುಗಾರ್,ಸತೀಶ,ಶಂಕರ ನಾಯ್ಕ ಆಯ್ಕೆಗೊಂಡಿದ್ದಾರೆ.




ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಎಮ್.ಸಿ ಸ್ವಾಮಿ,ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪಚಂದ್ರ ಶೆಟ್ಟಿ,ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಶಿವರಾಮ ಪೂಜಾರಿ ಯಡ್ತರೆ ಹಾಜರಿದ್ದರು.
News/Giri Shiruru
pic: Shabari Studio Yadthare