ಬೈಂದೂರು: ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ ನೂತನ ಅಧ್ಯಕ್ಷರಾಗಿ ಪತ್ರಕರ್ತ ಅರುಣ್ ಕುಮಾರ ಶಿರೂರು ನೇಮಕ ವಾಗಿದ್ದಾರೆ.
ಮಂಗಳವಾರ ಜೆ ಎನ್ ಅರ್ ಬಯಲು ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಲೆ ಸಾಹಿತ್ಯ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಬೈಂದೂರಿನ ಕೊಡುಗೆ ಅಪಾರವಾಗಿದೆ.ಅತ್ಯುತ್ತಮ ಸಾಂಂಸ್ಕ್ರತಿಕ ಸೊಗಡಿನ ಹಿನ್ನಲೆ ಹೊಂದಿದೆ .ಸಾಹಿತ್ಯ ಪರಿಷತ್ ಬೈಂದೂರು ಘಟಕ ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ಬೆಳಗಲಿ.ಕ್ಷೇತ್ರದ ಸಾಹಿತ್ಯಾಭಿಮಾನಿಗಳ ಸಾಂಘಿಕ ಸಂಭ್ರಮ ಮೇಳೈಸಲಿ ಎಂದರು.
ಜಿಲ್ಲಾ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟ ಆಶಯ ಭಾಷಣ ಮಾಡಿದರು. ನಿಕಟ ಪೂರ್ವ ಅಧ್ಯಕ್ಷ ರಘು ನಾಯ್ಕ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ನಿರ್ದೇಶಕ ಜೀವನ್ ರಾಮ್ ಸುಳ್ಯ ಇವರನ್ನು ಸಾಹಿತ್ಯ ಪರಿಷತ್ ವತಿಯಿಂದ ಗೌರವಿಸಲಾಯಿತು.

ಈ ಸಂದಭ೯ದಲ್ಲಿ ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಲಾವಣ್ಯ ಅಧ್ಯಕ್ಷ ನರಸಿಂಹ ನಾಯಕ್ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.ಬಳಿಕ ರಂಗ ಅಧ್ಯಯನ ಕೆಂದ್ರ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಮೂಡಬಿದ್ರೆ ಇವರಿಂದ ಚಾರುವಸಂತ ನಾಟಕ ಪ್ರದಶರ್ನ ಗೊಂಡಿತು.

News/Giri Shiruru

pic: Shashank Karanth Byndoor 

Leave a Reply

Your email address will not be published. Required fields are marked *

5 × 3 =