ಬೈಂದೂರು: ಮನುಷ್ಯನಾಗಿ ಜನ್ಮತಾಳಿದ ಮೇಲೆ ಸಮಾಜ ಸೇವೆಯ ಮೂಲಕ ನಮ್ಮ ಹೆಜ್ಜೆ ಗುರುತನ್ನು ಉಳಿಸಿ ಹೋಗಬೇಕು.ಜೇಸಿಯಂತಹ ಯುವಕರ ಸಂಸ್ಥೆ ವ್ಯಕ್ತಿತ್ವ ವಿಕಸನ ಮತ್ತು ಸಮಾಜ ಸೇವೆಗೆ ರಹದಾರಿ ಎಂದು ಕೇರಳ ಕಾಸರಗೋಡಿನ ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯದ ಮೇಲ್ವಿಚಾರಕಿ ರಾಜಯೋಗಿನಿ ಬಿ. ಕೆ. ವಿಜಯಲಕ್ಷ್ಮೀ ಹೇಳಿದರು ಅವರು ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಜೆಸಿಐ ಬೈಂದೂರು ಸಿಟಿ ಘಟಕದ ಈ ವರ್ಷದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ ಪರಸ್ಪರ ನಂಬಿಕೆ ವಿಶ್ವಾಸದಿಂದ ಸಂಘಟನೆ ಮೂಲಕ ಯುವಜನರಲ್ಲಿ ವ್ಯಕ್ತಿತ್ವ ವಿಕಸನದ ಮೂಲಕ ಮಾನವೀಯ ಮೌಲ್ಯ ರೂಪಿಸಿ ಸಮಾಜ ಸೇವಾ ಕಾರ್ಯ ಮಾಡುತ್ತಿರಿ ಎಂದರು.
2025ನೇ ಸಾಲಿನ ನೂತನ ಅಧ್ಯಕ್ಷ ರಾಜು ಕೆ. ಮೊಗವೀರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ ಬಿ. ಎ., ವಲಯ ಉಪಾಧ್ಯಕ್ಷೆ ಅಶ್ವಿನಿ ಐತಾಳ್, ಜೆಸಿಐ ನಿರ್ಗಮನ ಕಾರ್ಯದರ್ಶಿ ಗಣೇಶ ಪೂಜಾರಿ, ಶಿರೂರು ಜೆಸಿಐ ಪೂರ್ವಾಧ್ಯಕ್ಷ ಶಿರೂರು ಪ್ರಸಾದ ಪ್ರಭು,ಲೇಡಿ ಜೆಸಿ ಅಧ್ಯಕ್ಷೆ ಕವಿತಾ ಎನ್. ಶೇಟ್, ಜೆಜೆಸಿ ಅಧ್ಯಕ್ಷ ಹರ್ಷಿತ್ ಎನ್. ಶೇಟ್ ಮೊದಲಾವರು ಉಪಸ್ಥಿತರಿದ್ದರು.

ನಿರ್ಗಮಿ ತ ಅಧ್ಯಕ್ಷೆ ಅನಿತಾ ಆರ್. ಕೆ.ಸ್ವಾಗತಿಸಿದರು.ನೂತನ ಕಾರ್ಯದರ್ಶಿ ರಾಘವೇಂದ್ರ ಬಿ. ವಂದಿಸಿದರು.