ಶಿರೂರು: ಎಮ್.ಎಮ್.ಫೌಂಡೇಶನ್ ಶಿರೂರು ಹಾಗೂ ಜೆಸಿಐ ಶಿರೂರು ಇದರ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವ ಸಂಭ್ರಮದ ಪ್ರಯುಕ್ತ ನನ್ನ ದೇಶ ನನ್ನ ಜವಬ್ದಾರಿ ಉಪನ್ಯಾಸ ಮತ್ತು ಕುಟುಂಬ ಸಮ್ಮೀಲನ ಕಾರ್ಯಕ್ರಮ ಎಮ್.ಎಮ್.ರೇಸಾರ್ಟ್ ಗೋರ್ಟೆಯಲ್ಲಿ ನಡೆಯಿತು.
ಉಪನ್ಯಾಸಕ ಅಬ್ದುಲ್ ರವೂಪ್ ನನ್ನ ದೇಶ ಮತ್ತು ನನ್ನ ಜವಬ್ದಾರಿ ವಿಯಯದ ಕುರಿತು ವಿಶೇಷ ಉಪನ್ಯಾಸ ನೀಡಿ ವಿಶ್ವ ಮಾನವನಾಗುವ ಬದುಕು ನಮ್ಮದಾಗಬೇಕು.ಪರಸ್ಪರ ಪ್ರೀತಿ ವಿಶ್ವಾಸ.ಸಾಮರಸ್ಯದ ಸಂದೇಶ ಸಾರುವ ಇಂತಹ ಕಾರ್ಯಕ್ರಮಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯಗತ್ಯ.ಧರ್ಮ,ಜಾತಿಗಿಂತ ನಾವೆಲ್ಲರೂ ಭಾರತೀಯರು ಮತ್ತು ದೇಶದ ಬಗೆಗಿನ ಗೌರವ ಅತ್ಯಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಮೃದ್ದ ಬೈಂದೂರು ಸಂಘಟಕ ಹಾಗೂ ಉದ್ಯಮಿ ವೆಂಕಟೇಶ ಕಿಣಿ ಊರಿನ ಅಭಿವೃದ್ದಿಗೆ ಮೀರಾನ್ ಸರ್‌ರವರ ಕೊಡುಗೆ ಅಪಾರ.ವಿದೇಶದಲ್ಲಿದ್ದರು ಕೂಡ ಹುಟ್ಟೂರಿನ ಬಗೆಗಿನ ಪ್ರೀತಿ ಮತ್ತು ಪರಸ್ಪರ ಸಾಮರಸ್ಯದ ಸಂದೇಶ ಸಾರುವ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಬಾಬು ಪೂಜಾರಿ ಮೈದಿನಪುರ ರವರನ್ನು ಸಮ್ಮಾನಿಸಲಾಯಿತು.ಎಮ್‌ಎಮ್.ಫೌಂಡೇಶನ್ ಸಂಸ್ಥೆಯ ಮಣೆಗಾರ್ ಜಿಪ್ರಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಶಿರೂರು ಗ್ರಾ.ಪಂ ಉಪಾಧ್ಯಕ್ಷ ಕಾಪ್ಸಿ ನೂರ್‌ಮಹ್ಮದ್,ಧ.ಗ್ರಾ.ಯೋಜನೆಯ ರಘುರಾಮ ಕೆ.ಪೂಜಾರಿ,ಅಬ್ದುಲ್ ಜಬ್ಬರ್,ಸಮಾಜ ಸೇವಕ ಶೇಖ್ ಫಯಾಜ್ ಆಲಿ,ಜಯಂತ ಪೂಜಾರಿ ಹಾಜರಿದ್ದರು.

ಪತ್ರಕರ್ತ ಅರುಣ್ ಕುಮಾರ್ ಶಿರೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
News/Giri Shiruru
pic/Suresh makodi Alandoor