ಶಿರೂರು; ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 34ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ಅ.02 ರಿಂದ 05ರ ವರೆಗೆ ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ.
ಅ.02ರಂದು ಬೆಳಿಗ್ಗೆ 10 ಗಂಟೆಗೆ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾಪನೆ,ಪೂಜಾ ವಿಧಿ ವಿಧಾನಗಳು ,ಸಂಜೆ 6ಕ್ಕೆ ವೆಂಕಟೇಶ್ವರ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ,ರಾತ್ರಿ ಪೂಜೆ,ಪ್ರಸಾದ ವಿತರಣೆ ರಾತ್ರಿ 9ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕ್ರತಿಕ ವೈವಿದ್ಯ ಕಾರ್ಯಕ್ರಮಗಳು ನಡೆಯಲಿದೆ.
ಅ.03ರಂದು ಬೆಳಿಗ್ಗೆ ದುರ್ಗಾಹೋಮ, ರಾತ್ರಿ 8ಕ್ಕೆ ರಂಗಪೂಜೆ ನಡೆಯಲಿದೆ.ರಾತ್ರಿ 9ಕ್ಕೆ ನಾಗಶ್ರೀ ಭಜನಾ ಮಂಡಳಿ ಕರಾವಳಿ ಹಾಗೂ ಜೈ ಶ್ರೀರಾಮ್ ಮಹಿಳಾ ಭಜನಾ ಮಂಡಳಿ ತ್ರಾಸಿ ಕಂಚ್ಕೋಡು ಭಜನಾ ತಂಡಗಳಿಂದ ಭಜನಾ ಕುಣಿತ ನಡೆಯಲಿದೆ.
ಅ.04ರಂದು ಬೆಳಿಗ್ಗೆ ಚಂಡಿಕಾಹೋಮ,ಮದ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಆನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇದರ ಆಯ್ದ ಕಲಾವಿದರಿಂದ ತಿರುಪತಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.
ಅ.05 ರಂದು ಸಂಜೆ 4ಕ್ಕೆ ಶಾರದಾ ದೇವಿಯ ವಿಗ್ರಹ ವಿಸರ್ಜನಾ ಪೂಜೆ,ಪುರಮೆರವಣಿಗೆ ಬಳಿಕ ದೇವಸ್ಥಾನದ ಎದುರಿನ ಕೆರೆಯಲ್ಲಿ ವಿಗ್ರಹದ ಜಲಸ್ಥಂಭನ ನಡೆಯಲಿದೆ ಎಂದು ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.