ಬೈಂದೂರು: ಡಿ.11,12 ಹಾಗೂ 13 ರಂದು ಸಂಜೆ 7 ಗಂಟೆಗೆ ಕೆ.ವಿ ಸುಬ್ಬಣ್ಣ ಬಯಲು ವನರಂಗ ಮಂದಿರ ಹೊಸೂರಿನಲ್ಲಿ ಸಂಚಲನ(ರಿ.) ಹೊಸೂರು, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇದರ ವತಿಯಿಂದ ವನಸಿರಿಯಲ್ಲೊಂದು ರಂಗ ಸುಗ್ಗಿ ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವ ಕಾರ್ಯಕ್ರಮದ ಪತ್ರಿಕಾಗೋಷ್ಠಿ ಬೈಂದೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ಸಂಚಲನ ಸಂಸ್ಥೆಯ ಖಜಾಂಚಿ ನಾಗಪ್ಪ ಮರಾಠಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಡಿ.11 ರಂದು ರಾಜ್ಯಮಟ್ಟದ ಮೂರು ದಿನಗಳ ನಾಟಕೋತ್ಸವವನ್ನು ಎಸ್.ವಿ ಕಾಲೇಜು ಗಂಗೊಳ್ಳಿ ಉಪನ್ಯಾಸಕ ಸುಜಯೀಂದ್ರ ಹಂದೆ ಉದ್ಘಾಟಿಸಲಿದ್ದಾರೆ.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ.ಬೈಂದೂರು ವಲಯ ಮರಾಠಿ ಸಮಾಜದ ಅಧ್ಯಕ್ಷ ಭೋಜ ನಾಯ್ಕ ಶುಭಸಂಸನೆಗೈಯಲಿದ್ದಾರೆ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ ಹಾಗೂ ಹಿರಿಯ ನಾಟಿ ವೈದ್ಯ ಮಂಜ ಮರಾಠಿ ಗಂಗನಾಡು ರವರನ್ನು ಸಮ್ಮಾನಿಸಲಾಗುವುದು.ಬಳಿಕ ಸಂಗಮ್ ಕಲಾವಿದೆರ್ ಮಣಿಪಾಲ ಇವರಿಂದ ಮೃತ್ಯುಂಜಯ ನಾಟಕ ಪ್ರದರ್ಶನಗೊಳ್ಳಲಿದೆ.
ಡಿ.12 ರಂದು ಸಭಾ ಕಾರ್ಯಕ್ರಮದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು ಸಮಾಜ ಸೇವಕ ಲಿಜೋ ಇ.ಜೆ ಅಂಬಿಕಾನ್ ರವರನ್ನು ಸಮ್ಮಾನಿಸಲಾಗುವುದು ಹಾಗೂ ಮುಂತಾದ ಅತಿಥಿ ಗಣ್ಯರು ಆಗಮಿಸಲಿದ್ದಾರೆ.ಬಳಿಕ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇದರ ನಂದಗೋಕುಲ ಕಲಾವಿದರಿಂದ ಬಿಡುವನೇ ಬ್ರಹ್ಮಲಿಂಗ ನೃತ್ಯಗಳು ನಡೆಯಲಿದೆ.
ಡಿ.13 ರಂದು ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ ಜೋಗಿಜಡ್ಡು ರವರನ್ನು ಸಮ್ಮಾನಿಸಲಾಗುವುದು.ಬಳಿಕ ಸುರಭಿ ಬೈಂದೂರು ಇದರ ಬಾಲ ಕಲಾವಿದರಿಂದ ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಹೊಸೂರು ಸಂಚಲನ ತಂಡದವರಿಂದ ಹೋಳಿ ನೃತ್ಯ ಹಾಗೂ ಮದ್ದಳೆ ಕುಣಿತ ನಡೆಯಲಿದೆ ಎಂದು ಸಂಚಲನ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಚಲದ ಅಧ್ಯಕ್ಷ ಮಹಾದೇವ ಮರಾಠಿ,ಉಪಾಧ್ಯಕ್ಷ ನಾರಾಯಣ ಮರಾಠಿ,ದಯಾನಂದ ಮರಾಠಿ,ಕಾರ್ಯದರ್ಶಿ ರಾಜು ಮರಾಠಿ ಇದ್ದರು.
ಸುಧಾಕರ ಪಿ.ಬೈಂದೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
