ಬೈಂದೂರು: ಸ್ವರಾಜ್ಯ75 ತಂಡ,ರಾಷ್ಟ್ರೀಯ ಸೇವಾ ಯೋಜನೆ  ಘಟಕ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರು,ಹಸ್ತಚಿತ್ರ ಫೌಂಡೇಶನ್ ವಕ್ವಾಡಿ,ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ,ಉಸಿರು ಕೋಟ,ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಬೈಂದೂರು ತಾಲೂಕು ಘಟಕ ಹಾಗೂ ಸಮೃದ್ಥ ಜನಸೇವಾ ಚಾರಿಟೇಬಲ್ ಟ್ರಸ್ಟ್ ಬೈಂದೂರು, ಸಹಯೋಗದಲ್ಲಿ ಕಿರಿಮಂಜೇಶ್ವರ  ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ್ಪುಂದ ವೆಂಕಟ ಖಾರ್ವಿ  ಇವರ ಮನೆಗೆ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಮಫಲಕ ಅನಾವರಣಗೊಳಿಸಲಾಯಿತು.

ಕುಂದ ಅಧ್ಯಯನ ಕೇಂದ್ರ ದ ಉಪ್ಪುಂದ ಚಂದ್ರಶೇಖರ ಹೊಳ್ಳ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ತಲೆಮಾರಿಗೆ ನಮ್ಮ ಸಾಧಕರು ನೆಲ ಜಲ ಸಂಸ್ಕ್ರತಿ ಪರಿಸರದ ಅರಿವು ಮೂಡಿಸಬೇಕಾಗಿರುವುದು ನಮ್ಮ ಜವಬ್ದಾರಿ.ನಮ್ಮ ಪರಿಸರದ ಸಾಧಕರನ್ನು ಗುರುತಿಸುವ ಅತ್ಯತ್ತಮ ಕಾರ್ಯಕ್ರಮ ಇದಾಗಿದೆ ಎಂದರು.

ಪತ್ರಕರ್ತ ಅರುಣ್ ಕುಮಾರ ಶಿರೂರು ರಾಷ್ಟ್ರ ಧ್ವಜಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವೆಂಕಟ ಖಾರ್ವಿ ಉಪ್ಪುಂದ,ಕವಿತಾ ಆಚಾರ್ಯ ಮುದೂರು,ಪ್ರಸನ್ನ ಮಯ್ಯ, ಅಕ್ಷತಾ ಗಿರೀಶ್ ಐತಾಳ್,ಆಶಾಲತಾ ಮರವಂತೆ ,ಗಣೇಶ್ ಖಾರ್ವಿ ಕಿರಿಮಂಜೇಶ್ವರ  ಉಪಸ್ಥಿತರಿದ್ದರು.

ಸಂಚಾಲಕ ಪ್ರದೀಪ್ ಕುಮಾರ್ ಬಸ್ರೂರು ಪ್ರಾಸ್ತಾವಿಕ  ಮಾತುಗಳನ್ನಾಡಿದರು. ಪ್ರಸಾದ್ ಮೊಗವೀರ ಕಾರ್ಯಕ್ರಮ ನಿರೂಪಿಸಿದರು.ರಮಿತ್ ಕುಮಾರ್ ವಂದಿಸಿದರು.

 

Leave a Reply

Your email address will not be published. Required fields are marked *

eight − 6 =