ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ(ರಿ.)ಕರಾವಳಿ ಶಿರೂರು ಇದರ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಯಶವಂತ ಬಿಲ್ಲವ ಹಾಗೂ ನೂತನ ಕಾರ್ಯದರ್ಶಿಯಾಗಿ ನಾಗರಾಜ ಬಿಲ್ಲವ ಚಂಬಿತ್ಲು ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ನಾಗಪ್ಪ ಬಿಲ್ಲವ ಅಣ್ಣುಮನೆ,ಉಪಾಧ್ಯಕ್ಷರಾಗಿ ಭಾಸ್ಕರ ಮೊಗೇರ್,ಉಪಕಾರ್ಯದರ್ಶಿಯಾಗಿ ಗಿರೀಶ್ ಮೊಗವೀರ,ಸಂಘಟನಾ ಕಾರ್ಯದರ್ಶಿಯಾಗಿ ತಿಮ್ಮಪ್ಪ ಎಲ್.ಮೊಗೇರ್,ಕೋಶಾಧ್ಯಕ್ಷರಾಗಿ ವಿಠ್ಠಲ ಬಿಲ್ಲವ,ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ನಾಗೇಶ್ ಮೊಗೇರ್,ಶಿವರಾಜ್ ಬಿಲ್ಲವ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮಂಗಳು ಬಿಲ್ಲವ,ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಶಿರೂರು,ನಿಕಟಪೂರ್ವ ಕಾರ್ಯದಶಿ೯ ಮಹೇಶ್ ಮೊಗೇರ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.
