ಶಿರೂರು: ಪಿ.ಎಂ. ಶ್ರೀ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರಿನಲ್ಲಿ ನಡೆದ ಬೈಂದೂರು ವೃತ್ತ ಸಂಯೋಜಕರ ಮಟ್ಟದ ಸಮಾಲೋಚನಾ ಸಭೆಯಲ್ಲಿ ಉತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಪುರಸ್ಕೃತರಾದ ಶಿರೂರು ಮಾದರಿ ಶಾಲೆಯ ಮುಖ್ಯ ಶಿಕ್ಷಕ ಶಂಕರ ಶಿರೂರು, ರಾಜ್ಯ ಶಿಕ್ಷಕ ಪರಿಷತ್ ಧಾರವಾಡ ರಾಜ್ಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ಗಂಗನಾಡು ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ್ ಬಿಲ್ಲವ ಹಾಗೂ ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಸಮೂಹ ಸಂಪನ್ಮೂಲ ವ್ಯಕ್ತಿ ಗಣೇಶ್ ಪೂಜಾರಿ ಇವರನ್ನು ಸಮ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಕೃಷ್ಣ .ಬಿ. ಪೂಜಾರಿ, ಕ್ಷೇತ್ರ ಸಂಪನ್ಮೂಲ ಅಽಕಾರಿ ಮಂಜುನಾಥ್ ನಾಯ್ಕ,ಆಲಂದೂರು ಶಾಲಾ ಮುಖ್ಯ ಶಿಕ್ಷಕ ಮಾಧವ ಬಿಲ್ಲವ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು .
ಬೈಂದೂರು ಸಂಪನ್ಮೂಲ ವ್ಯಕ್ತಿ ಸಿ.ಎನ್. ಬಿಲ್ಲವ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಗೋವಿಂದ ಎಂ.ಹೊಸೂರು ವಂದಿಸಿದರು.