ಶಿರೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಬೈಂದೂರು ತಾಲೂಕಿನ ಬೈಂದೂರು ವಲಯದ ಶಿರೂರು ಬಿ ಕಾರ್ಯಕ್ಷೇತ್ರದಲ್ಲಿ, ಚೌಡೇಶ್ವರಿ ಜ್ಞಾನ ವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಶಿರೂರು ಗ್ರಾಮ ಪಂಚಾಯತ್ ಸದಸ್ಯ ಉದಯ ಪೂಜಾರಿ ಮೈದಿನಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗರ್ಭಿಣಿಯರು ನಿತ್ಯ ಸೇವಿಸುವ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಬೇಕು.ಸಾಮಾನ್ಯ ಮಹಿಳೆಗಿಂತ ಗರ್ಭಿಣಿಯರು ಮೂರು ಪಟ್ಟು ಹೆಚ್ಚು ಕ್ಯಾಲೋರಿಯುಕ್ತ ಆಹಾರ ಸೇವಿಸಬೇಕು.ಪೌಷ್ಟಿಕ ಆಹಾರದ ಮೂಲಕ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು.
ಕುಂದಾಪುರ ಆರೋಗ್ಯ ಶಿಕ್ಷಣ ಅಧಿಕಾರಿ ಭಾಗ್ಯಲಕ್ಷ್ಮಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಧ.ಗ್ರಾ.ಯೋಜನೆ ಕೇಂದ್ರ ಒಕ್ಕೂಟದ ಅಧ್ಯಕ್ಷ ರಘುರಾಮ್ ಕೆ ಪೂಜಾರಿ,ಗ್ರಾಮ ಪಂಚಾಯತ್ ಸದಸ್ಯೆ ನಾಗರತ್ನ,ಜನಜಾಗೃತಿ ವೇದಿಕೆ ಸದಸ್ಯಪ್ರಸಾದ ಪ್ರಭು,ವಲಯ ಮೇಲ್ವಿಚಾರಕ ರಾಮಚಂದ್ರ,ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ,ಒಕ್ಕೂಟದ ಉಪಾಧ್ಯಕ್ಷ ಆರತಿ,ಸಂಯೋಜಕಿ ನಾಗರತ್ನ,ಸೇವಾ ಪ್ರತಿನಿಧಿ ಭಾಸ್ಕರ್,ಸುಜಾತ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.